ದೀಪಕ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಸಿಟಿ ರವಿ ಆಗ್ರಹ

10:44 AM, Thursday, January 4th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

C-T-Raviಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ನ ಕಾಟಿಪಳ್ಳದಲ್ಲಿ ದುರ್ಷರ್ಮಿಗಳಿಂದ ಹತ್ಯೆಗೇಡಾದ ದೀಪಕ್ ರಾವ್ ಅವರ ಕುಟುಂಬಕ್ಕೆ ಪರಿಹಾರವಾಗಿ ರಾಜ್ಯ ಸರಕಾರ 25 ಲಕ್ಷ ರೂಪಾಯಿ ನೀಡಬೇಕೆಂದು ಬಿಜೆಪಿ ಮುಖಂಡ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ದೀಪಕ್ ಕೊಲೆ ಪ್ರಕರಣ, ಸಿನಿಮೀಯ ರೀತಿಯಲ್ಲಿ 4 ಶಂಕಿತರ ಬಂಧನ ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟ ದೀಪಕ್ ರಾವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ಎ.ಜೆ.ಆಸ್ಪತ್ರೆಗ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಎ.ಜೆ. ಆಸ್ಪತ್ರೆಗೆ ಭೇಟಿ ನೀಡಿದ ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ದೀಪಕ್ ರಾವ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ತರಬೇತಿ ಪಡೆದಿರುವ ದುರ್ಷರ್ಮಿಗಳಿಂದಲೇ ಈ ರೀತಿಯ ಕೊಲೆ ಮಾಡಲು ಸಾಧ್ಯ,” ಎಂದು ಹೇಳಿದ ಅವರು, “ಕಾಂಗ್ರೆಸ್ ನ ಓಟ್ ಬ್ಯಾಂಕ್ ನೀತಿಯೇ ಈ ಕೊಲೆಗಳಿಗೆ ಕಾರಣವಾಗುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ದನಕಳ್ಳತನ ಮಾಡುತ್ತಿದ್ದ ಕಬೀರ್ ನ ಸಾವಾದಾಗ ಆತನ ಮನೆಗೆ ತೆರಳಿ ಪರಿಹಾರ ನೀಡಿದ್ದ ರಾಜ್ಯ ಸರಕಾರ ಹಿಂದೂಗಳ ನಿರಂತರ ಕೊಲೆಯಾದರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಅವರು ಕಿಡಿಕಾರಿದರು. ದೀಪಕ್ ಹತ್ಯೆಗೆ ಕಾರಣರಾದವರನ್ನು ಶೀಘ್ರ ಬಂಧಿಸಬೇಕು ಎಂದು ಅವರು ಪೋಲೀಸ್ ಇಲಾಖೆಯನ್ನು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English