ದೀಪಕ್ ರಾವ್ ಕೊಲೆ ಪ್ರಕರಣ: ರಮಾನಾಥ ರೈ-ಶೋಭಾ ಕರಂದ್ಲಾಜೆ ಜಟಾಪಟಿ

12:47 PM, Thursday, January 4th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ramanathಮಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೃತ ದಿಪಕ್ ರಾವ್ ಅವರ ಶವಯಾತ್ರೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ಮುಂಚೆಯೂ ಮೆರವಣಿಗೆಗಳು ನಡೆದ ಸಂದರ್ಭದಲ್ಲಿ ಘರ್ಷಣೆಗಳಾಗಿರುವ ಉದಾಹರಣೆಗಳು ಜಿಲ್ಲೆಯಲ್ಲಿ ಇವೆ ಹಾಗಾಗಿ ಪೊಲೀಸರು ಶವ ಯಾತ್ರೆಗೆ ಅನುಮತಿ ನಿರಾಕರಿಸುತ್ತಿದ್ದಾರೆ ಎಂದರು.

ದೀಪಕ್ ಮೃತ ದೇಹ ಗೌಪ್ಯವಾಗಿ ಮನೆಗೆ ಶಿಫ್ಟ್, ಶವಯಾತ್ರೆಗೆ ಬಿಗಿಪಟ್ಟು ಮಾಧ್ಯಮದ ಪೋನ್ ಇನ್ ನಲ್ಲಿ ಎದುರುಬದುರಾದ ಸಚಿವ ರಮಾನಾಥ ರೈ ಹಾಗೂ ಶೋಭಾ ಕರಂದ್ಲಾಜೆ ಮಧ್ಯೆ ಕಾವೇರಿದ ಆರೋಪ ಪ್ರತ್ಯಾರೋಪ ನಡೆಯಿತು, ತೀರ್ವ ಜಟಾಪಟಿ ನಡೆಸಿದ ಇಬ್ಬರು ಮುಖಂಡರು ಪರಸ್ಪರ ಪಕ್ಷಗಳನ್ನು ಮೂದಲಿಸಿಕೊಂಡರು. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇಬ್ಬರು ಮುಖಂಡರ ಮಾತುಕತೆ.

ಯಡಿಯೂರಪ್ಪ ಇದ್ದಾಗಲೂ ಆ ಸಂಘಟನೆಗಳು ಇದ್ದವು ಜಿಹಾದಿ ಮನಸ್ಥಿತಿಯ ಸಂಘಟನೆಗಳಾದ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ ಎಂಬ ಶೋಭಾ ಕರಂದ್ಲಾಜೆ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಅಸ್ತಿತ್ವದಲ್ಲಿತ್ತು, ಆಗ ಏಕೆ ಅವರು ನಿಷೇಧಿಸಲಿಲ್ಲ, ಆ ಸಂಘಟನೆಗಳು ಕರ್ನಾಟದಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆ ಇವೆ ಮೋದಿ ಅವರೇ ಸಂಘಟನೆಗಳ ಮೇಲೆ ನಿಷೇಧ ಹೇರಲಿ ಎಂದರು.

ಮಂಗಳೂರಿಗೆ ಎಡಿಜಿಪಿ ಕಮಲ್‌ ಪಂತ್ ದೌಡು, ಬಿಗಿ ಬಂದೋಬಸ್ತ್ ಎರಡೂ ಉಗ್ರ ಸಂಘಟನೆಗಳನ್ನು ನಿಷೇಧಿಸಲಿ ಬಲಪಂಥೀಯ ಸಂಘಟನೆಗಳಿಂದಲೂ ಹತ್ಯೆಗಳು ನಡೆದಿವೆ ಎಂದ ರಮಾನಾಥ ರೈ ಅವರು, ಭಜರಂಗದಳವನ್ನೂ ನಿಷೇಧಿಸಬೇಕಿದೆ ಎಂದರು. ಇದಕ್ಕೆ ಕೆರಳಿದ ಶೋಭಾ ಕರಂದ್ಲಾಜೆ ಅವರು ನಿಮಗೆ ತಾಕತ್ತಿದ್ದರೆ ಭಜರಂಗದಳ ಸಂಘಟನೆಯನ್ನು ನಿಷೇಧಿಸಿ ಎಂದು ಸವಾಲು ಹಾಕಿದರು.

ನೀವು ಜಿಲ್ಲೆಯ ಎಸ್‌ಪಿ ಅವರ ಜೊತೆ ಸೇರಿಕೊಂಡು ರೌಡಿ ಶೀಟರ್‌ ಅನ್ನು ಜೊತೆಗೆ ಕೂರಿಸಿಕೊಂಡು ಸಭೆ ಮಾಡಿದ್ದೀರಿ ಎಂದು ಶೋಭಾ ಕರಂದ್ಲಾಜೆ ಏರಿದ ಧ್ವನಿಯಲ್ಲಿ ಅಬ್ಬರಿಸಿದರು. ಇದಕ್ಕೆ ಕೆರಳಿದ ರಮಾನಾಥ ರೈ ಅವರು, ನಿಮಗೆ ತಾಕತ್ತಿದ್ದರೆ ಅದನ್ನು ಸಾಬೀತು ಮಾಡಿ ಎಂದು ರಮಾನಾಥ ರೈ ಸವಾಲೆಸೆದರು. ಇದರಿಂದ ಬೇಸರಗೊಂಡ ಶೋಭಾ ಅವರು ನಿಮ್ಮ ಮಟ್ಟಕ್ಕೆ ನಾನು ಮಾತನಾಡಲು ಸಾಧ್ಯವಿಲ್ಲ ನಾನು ಕರೆ ಅಂತ್ಯಗೊಳಿಸುತ್ತೇನೆ ಎಂದು ಹೇಳಿ ಕಾಲ್ ಕಟ್ ಮಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English