ನವದೆಹಲಿ: ಅಪನಗದೀಕರಣ ಜಾರಿಗೆ ಬಂದ ಬಳಿಕ ಕರೆನ್ಸಿ ನೋಟುಗಳಲ್ಲಿ ಭಾರಿ ಬದಲಾವಣೆಯಾಗಿವೆ. ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಿರುವ ಮೋದಿ ಸರ್ಕಾರ, ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಆದರೆ, ಹೊಸ ಹೊಸ ನೋಟುಗಳನ್ನು ಕೂಡಾ ಕಾಲಕಾಲಕ್ಕೆ ಹೊರತರಲಾಗುತ್ತಿದೆ.
ಹೊಸ ಹತ್ತು ರೂಪಾಯಿ ನೋಟನ್ನು ಬಿಡುಗಡೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಜ್ಜಾಗಿದೆ. ಮಹಾತ್ಮಾ ಗಾಂಧಿ ಸರಣಿಯ ಈ ನೋಟು ಚಾಕಲೇಟ್ ಕಲರ್ ಹೊಂದಿದೆ.
ಕೋನಾರ್ಕದ ಸೂರ್ಯ ದೇವಾಲಯದ ಚಿತ್ರ ನೋಟಿನಲ್ಲಿರುವ ವಿಶೇಷತೆ. ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ರ ಸಹಿ ಕೂಡ ಇದರ ಮೇಲಿರಲಿದೆ. ಇದಲ್ಲದೆ, 50, 200 ರುಪಾಯಿ ನೋಟುಗಳು ಕೂಡಾ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ. ಇದಲ್ಲದೆ ಜತೆಗೆ ಹೊಸ 100 ರುಪಾಯಿ ನೋಟುಗಳನ್ನು ಕೂಡಾ ಹೊರ ತರಲು ಆರ್ ಬಿಐ ಚಿಂತನೆ ನಡೆಸಿದೆ.
Click this button or press Ctrl+G to toggle between Kannada and English