ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್, ಬಷೀರ್ ಮನೆಗೆ ಸಿಎಂ ಭೇಟಿ

10:13 AM, Monday, January 8th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

deepak-raoಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾದ ದೀಪಕ್ ರಾವ್ ಮತ್ತು ಅಬ್ದುಲ್ ಬಷೀರ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದಕ್ಷಿಣ ಕನ್ನಡ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಮೊದಲಿಗೆ ಸುರತ್ಕಲ್ ಕಾಟಿಪಳ್ಳದಲ್ಲಿರುವ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಸಂಜೆ ವೇಳೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು. ಸಿ‌.ಎಂ ಅವರೊಂದಿಗೆ ಸಚಿವ ರಮನಾಥ್ ರೈ, ಯು.ಟಿ ಖಾದರ್, ಮಂಗಳೂರು ಮೇಯರ್ ಕವಿತಾ ಸನಿಲ್ ಕೂಡ ದೀಪಕ್ ಮನೆಗೆ ಭೇಟಿ ನೀಡಿದರು.

ಸಂಕಷ್ಟಕ್ಕೆ ಸ್ಪಂದಿಸಿದ ಜನ, ದೀಪಕ್ ತಾಯಿ ಖಾತೆಯಲ್ಲೀಗ 32 ಲಕ್ಷ ರೂ. ಜನವರಿ 3 ರಂದು ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ದೀಪಕ್ ರಾವ್ ಹತ್ಯೆಗೀಡಾಗಿದ್ದರು.

deepak-rao-2ಅಬ್ದುಲ್ ಬಷೀರ್ ಮನೆಗೆ ಭೇಟಿ ನಂತರ ಮುಖ್ಯಮಂತ್ರಿಗಳು ಜನವರಿ 3ರಂದೇ ರಾತ್ರಿ ಹಲ್ಲೆಗೊಳಗಾಗಿ ಭಾನುವಾರ ಬೆಳಿಗ್ಗೆ ನಿಧನರಾದ ಅಬ್ದುಲ್ ಬಶೀರ್ ಮನೆಗೆ ಭೇಟಿ ನೀಡಿದರು. ಕರಾವಳಿಯಲ್ಲಿ ಹೆಣ ಇಟ್ಕೊಂಡು ರಾಜಕೀಯ ಮಾಡ್ತಿದ್ದಾರೆ: ಸಿಎಂ ಕಿಡಿ ಮಂಗಳೂರಿನ ಆಕಾಶಭವನದಲ್ಲಿರುವ ಬಷೀರ್ ಮನೆಗೆ ತರಳಿದ ಮುಖ್ಯಮಂತ್ರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು ಬಷೀರ್ ಹತ್ಯೆ ಹಿನ್ನಲೆಯಲ್ಲಿ ಶಾಂತಿ ಕಾಪಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

“ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೀಪಕ್ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಿದಂತೆ ಬಶೀರ್ ಕುಟುಂಬಕ್ಕೂ ನೀಡಲಾಗುತ್ತದೆ. ದೀಪಕ್ ರಾವ್ ಹಾಗೂ ಬಶೀರ್ ಅವರನ್ನು ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

“ಈ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವ ಸಂಘಟನೆ ಇದರಲ್ಲಿ ಭಾಗಿಯಾಗಿದೆ ಎಂದು ತನಿಖೆ ನಡೆಯಲಿದೆ,” ಎಂಬುದಾಗಿ ಸಿದ್ದರಾಮಯ್ಯ ವಿವರ ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English