ದೀಪಕ್‌ ಆಸೆ ಈಡೇರಿದಾಗ ಆತನ ಆತ್ಮಕ್ಕೆ ಶಾಂತಿ: ನಳಿನ್‌

12:18 PM, Monday, January 8th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Nalin-kmarಸುರತ್ಕಲ್: ದೀಪಕ್ ರಾವ್ ದೇಶ ಸೇವೆಗಾಗಿ ಸಂಘಟನೆಗೆ ಬಂದಿದ್ದರು, ಅವರು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಅವರ ಆಸೆಗಳು ಬತ್ತಬಾರದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್ ಹೇಳಿದರು.

ಭಾನುವಾರ ಸುರತ್ಕಲ್‌ ಸಮೀಪದ ಕೃಷ್ಣಾಪುರ 3ನೇ ಬ್ಲಾಕ್‌ನ ನಾರಾಯಣ ಗುರು ಶಾಲಾ ಮೈದಾನದಲ್ಲಿ ಮೃತ ದೀಪಕ್‌ ಅವರಿಗೆ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ದೀಪಕ್‌ ಅವರ ಆಸಗಳನ್ನು ಈಡೇರಿಸಲು ನಾವು ಮುಂದಾಗಬೇಕು. ಅಗಲೇ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಂಘರ್ಷಗಳಿಂದ ಸಾಮರಸ್ಯ ಕದಡುತ್ತದೆಯೇ ಹೊರತು ಬಾಂಧವ್ಯಗಳು ಬೆಸೆಯುವುದಿಲ್ಲ. ನಾವೆಲ್ಲರೂ ಜತೆಯಾಗಿ ಸೇವೆಯ ಮೂಲಕ ಸಾಮರಸ್ಯ ಬಲಪಡಿಸೋಣ ಎಂಧರು.

ಇದೇ ವೇಳೆ ದೀಪಕ್‌ ಕಲಿತ ಶಾಲೆಯ ದೈಹಿಕ ಶಿಕ್ಷಕ ಸುಂದರ್‌ ಮಾತನಾಡಿ, ದೀಪಕ್‌ ಶ್ರೀಮಂತನಲ್ಲ. ಆದರೂ ಶಾಲಾ ಜೀವನದಲ್ಲಿ ಪ್ರತಿಯೊಂದು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ. ಅಂತಹ ಒಬ್ಬ ವಿದ್ಯಾರ್ಥಿ ಇಲ್ಲ ಎಂದು ಹೇಳುವುದನ್ನು ಊಹಿಸಲೂ ಸಾಧ್ಯವಿಲ್ಲ.

ಅವನ ಸಹಾಯ ಮಾಡುವ ಗುಣವೇ ಅವನ ವ್ಯಕ್ತಿತ್ವವನ್ನು ತೋರಿಸುತ್ತದೆ. ಅಂತಹ ಒಳ್ಳೆಯ ಹಳೆ ವಿದ್ಯಾರ್ಥಿಯನ್ನು ಕಳೆದುಕೊಂಡ ನೋವನ್ನು ಮರಿಯಲು ಸಾಧ್ಯವಿಲ್ಲ ಎಂದರು. ಈ ವೇಳೆ ಬಜರಂಗದಳ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ಮಾಜಿ ಸಚಿವ ಕೃಷ್ಣ ಪಾಲೇಮಾರ್‌ ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English