ಧರ್ಮಸ್ಥಳದಲ್ಲಿ 13ನೇ ವರ್ಷದ ಭಜನಾ ತರಬೇತಿ ಕಮ್ಮಟದ ಉದ್ಘಾಟನೆ

2:30 PM, Tuesday, September 13th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

Darmasthala Bajana Kammata

ಬೆಳ್ತಂಗಡಿ :  ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ 13ನೇ ವರ್ಷದ ಭಜನಾ ತರಬೇತಿ ಕಮ್ಮಟದ ಉದ್ಘಾಟನಾ ಸಮಾರಂಭವನ್ನು ಸೋಮವಾರ ಹೇಮಾವತಿ ವೀ. ಹೆಗ್ಗಡೆ ಅವರು ಉದ್ಘಾಟಿಸಿದರು. ಕಮ್ಮಟ ಉದ್ಘಾಟಿಸಿದ ಹೇಮಾವತಿ ವೀ. ಹೆಗ್ಗಡೆ ಅವರು, ಭಗವಂತನ ಜತೆ ಸಂವಾದ ನಡೆಸುವ, ಭಗವಂತನನ್ನು ಒಲಿಸಿಕೊಳ್ಳುವ ಯತ್ನ ಭಜನೆ. ನಮ್ಮ ಧ್ವನಿಯನ್ನು ವಿಶ್ವದ ಧ್ವನಿ ಜತೆಗೆ ಸೇರಿಸುವ ಭಜನೆಯಿಂದ ಸಾಮಾಜಿಕ ಅಂತಸ್ತು, ಮೇಲು ಕೀಳೆಂಬ ಭಾವ ಮರೆಸಿ ಸಾಮಾಜಿಕ ಧ್ವನಿಯಾಗುತ್ತದೆ ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಭಜನಾ ಮಂದಿರಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳು. ಅವು ದೇವರ ಜತೆಗೆ ಸಂಬಂಧ ಬೆಳೆಸುವ ಕೇಂದ್ರಗಳಾಗಿದೆ. ಭಜನೆಗೆ ಮಾನಸಿಕ ನೆಮ್ಮದಿ, ಸಮಸ್ಯೆಗೆ ಪರಿಹಾರ ಕೊಡುವ, ಮಾರ್ಗದರ್ಶಕ, ಸಂಸ್ಕಾರ ಕೊಡುವ, ಶಕ್ತಿ ಇದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಭಜನಾ ತರಬೇತಿ ಜತೆಗೆ ನಾಯಕತ್ವ, ವ್ಯಕ್ತಿತ್ವದ ಬದಲಾವಣೆಗೆ ಮಾರ್ಗದರ್ಶನ ನೀಡಲಾಗುತ್ತದೆ. ವ್ಯವಹಾರದಲ್ಲಿ ಸತ್ಯ, ಧರ್ಮ, ನಿಷ್ಠೆ ಬರುವಂತಾಗಬೆಕೆಂದು ಹೇಳಿದರು. ದೇವರ ಸಾಮೀಪ್ಯಕ್ಕೆ ಹೋಗಲು ಭಜನೆ ಹಾಗೂ ಭಜನಾ ಮಂದಿರದಷ್ಟು ಸುಲಭದ ದಾರಿ ಬೇರೆ ಇಲ್ಲ ಎಂದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಮನುಷ್ಯನ ಸ್ವಭಾವ ಬದಲಾಗಿದೆಯೇ ಹೊರತು ಕಾಲ, ಸಂಸ್ಕೃತಿಯಲ್ಲ. ಭಾವನಾತ್ಮಕ ಭಜನಾ ಸಂಕೀರ್ತನೆಯಲ್ಲಿ ನಾವು ಭಾಗಿಗಳಾಗಬೇಕು ಎಂದರು.

ಚಿಕ್ಕಮಗಳೂರು, ದ.ಕ., ಉಡುಪಿ, ಶಿವಮೊಗ್ಗ, ಕೊಡಗು ಜಿಲ್ಲೆಗಳ 60 ಭಜನಾ ಮಂಡಳಿಗಳ 125 ಮಂದಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ಇದುವರೆಗೆ 2,170 ಮಂದಿಗೆ ತರಬೇತಿ ನೀಡಲಾಗಿದೆ.

ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ ಕೆದ್ಲಾಯ ಉಪಸ್ಥಿತರಿದ್ದರು.

ಭಜನಾ ತರಬೇತಿ ಸಮಿತಿಯ ಕಾರ್ಯದರ್ಶಿ ವಸಂತ ಸಾಲಿಯಾನ್‌ ಸ್ವಾಗತಿಸಿ, ಶ್ರೀನಿವಾಸ ರಾವ್‌ ನಿರ್ವಹಿಸಿದರು. ರತ್ನವರ್ಮ ಜೈನ್‌ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English