ಮಂಗಳೂರು: ಬಶೀರ್ ಹಾಗೂ ದೀಪಕ್ ಕೊಲೆ ಪ್ರಕರಣಗಳ ಆರೋಪಿಗಳ ಪರ ಯಾವುದೇ ಕಾರಣಕ್ಕೂ ದ.ಕ. ಜಿಲ್ಲೆಯ ಯಾವ ವಕೀಲರೂ ವಕಾಲತ್ತು ಮಾಡಬಾರದು. ಈ ಕುರಿತು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ವಕೀಲರ ಸಂಘಕ್ಕೆ ನಾಳೆ ಮನವಿ ಸಲ್ಲಿಸಲಾಗುವುದು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ವಕೀಲರು ಆರೋಪಿಗಳ ಪರ ನಿಂತರೆ ಅವರು ದ.ಕ. ಜಿಲ್ಲೆಯ ಕೋಮು ಸೌಹಾರ್ದತೆಯ ವಿರುದ್ಧವಿದ್ದಾರೆ ಎಂದರ್ಥ ಎಂದರು.
ದೀಪಕ್ ರಾವ್ ಹಾಗೂ ಬಶೀರ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇಲಾಖೆಗೆ ಅಭಿನಂದನೆಗಳು. ಈ ಎರಡೂ ಘಟನೆಗಳಿಗೆ ಕುಮ್ಮಕ್ಕು ನೀಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕೆಂದ ಅವರು, ತನ್ನ ಮೇಲೆ ದಾಳಿಗೆ ತಂಡವೊಂದು ಯತ್ನಿಸಿತ್ತು ಎಂದು ಸುಳ್ಳು ಸುದ್ದಿ ಹಬ್ಬಿಸಿದ ಭರತ್ ಜಿಲ್ಲೆಯ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ್ದಾರೆ. ಇವರ ಮೇಲೆ ಗೂಂಡಾ ಕಾಯ್ದೆ ಹೇರಬೇಕು ಎಂದು ಕಮಿಷನರ್‌ಗೆ ಮನವಿ ಮಾಡಲಾಗುವುದು ಎಂದರು.
Click this button or press Ctrl+G to toggle between Kannada and English