ಉಡುಪಿ: ಪಲಿಮಾರು ಮಠದ ಪರ್ಯಾಯದ ಅಂಗವಾಗಿ ಮಂಗಳೂರಿನ ಶರವು ಶ್ರೀ ಮಹಾಗಣಪತಿದೇವಸ್ಥಾನದಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕೇಂದ್ರ ಇಂದು ಉದ್ಘಾಟನೆಗೊಂಡಿತು.
ಶ್ರೀ ಕ್ಷೇತ್ರಕಟೀಲಿನ ಲಕ್ಷ್ಮೀ ನಾರಾಯಣಆಸ್ರಣ್ಣಕೇಂದ್ರವನ್ನು ದೀಪಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಪರ್ಯಾಯ ಮಹೋತ್ಸವಕ್ಕೆ ಸರ್ವರ ಸಹಕಾರವನ್ನು ಯಾಚಿಸಿದರು, ಕಟೀಲುಅನಂತಆಸ್ರಣ್ಣ ಮಾತನಾಡಿ ಪರ್ಯಾಯ ಶ್ರೀಗಳ ಹುಟ್ಟೂರುಕಟೀಲು ಸಮೀಪದ ಶಿಬರೂರು ಆದ್ದರಿಂದ ಹುಟ್ಟೂರು ನೆಲೆಯಲ್ಲಿ ಭಕಾದಿಗಳು ಈ ನಾಡಹಬ್ಬದ ಯಶಸ್ವಿನಲ್ಲಿ ಪೂರ್ಣರೀತಿಯಲ್ಲಿ ಸಹಕರಿಸಬೇಕೆಂದು ವಿನಂತಿಸಿದರು. ಶರವುಕ್ಷೇತ್ರದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶ್ರೀ ರಾಘವೇಂದ್ರ ಶಾಸ್ತ್ರಿ ಶುಭ ಹಾರೈಸಿದರು.
ಈ ಸಂದರ್ಭ ಹರಿಕೃಷ್ಣ ಪುನರೂರು, ಎಸ್. ಪ್ರದೀಪಕುಂಆರಕಲ್ಕೂರ, ಎಂ. ಬಿ ಪುರಾಣಿಕ್, ಕೆ.ಎಸ್. ಕಲ್ಲೂರಾಯ, ದಿಯಾ ಸಿಸ್ಟಂಸ್ಸ್‌ನ ಡಾ|ರವಿಶಂಕರ್, ಮೊಹನ್ ಮೆಂಡನ್, ಮೊದಲಾದವರು ಉಪಸ್ಥಿತರಿದ್ದರು, ಸುಧಾಕರ್‌ರಾವ್ ಪೇಜಾವರಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English