ಸುರತ್ಕಲ್‌ನಲ್ಲಿ ಯುವಕನ ಮೇಲೆ ದಾಳಿ ಪ್ರಕರಣ: ಇಬ್ಬರು ಪೊಲೀಸ್ ವಶಕ್ಕೆ?

12:44 PM, Thursday, January 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Mohhammedಮಂಗಳೂರು: ಸುರತ್ಕಲ್‌ನಲ್ಲಿ ಜನವರಿ 3ರಂದು ರಾತ್ರಿ ಬಂದರ್ ನಿವಾಸಿ ಮುಹಮ್ಮದ್ ಮುಬಶ್ಶಿರ್(22) ಎಂಬವರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ತನಿಖಾ ತಂಡವು ಬುಧವಾರ ರಾತ್ರಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಅವರನ್ನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ವಶಕ್ಕೆ ಪಡೆಯಲಾದ ಇಬ್ಬರೂ ಸಂಘಪರಿವಾರದ ಕಾರ್ಯಕರ್ತರೆಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಜನವರಿ 3ರಂದು ಮಧ್ಯಾಹ್ನ ಕಾಟಿಪಳ್ಳದಲ್ಲಿ ದೀಪಕ್ ರಾವ್ ಹತ್ಯೆ ನಡೆದಿತ್ತು. ಬಳಿಕದ ಬೆಳವಣಿಗೆಯಲ್ಲಿ ಅಂದು ರಾತ್ರಿ ಮುಬಶ್ಶಿರ್ ಮೇಲೆ ಸುರತ್ಕಲ್‌ನಲ್ಲಿ ತಂಡವೊಂದು ದಾಳಿ ನಡೆಸಿತ್ತು. ಮಂಗಳೂರಿನ ಬಂದರ್ ನಿವಾಸಿಯಾಗಿರುವ ಮುಹಮ್ಮದ್ ಮುಬಶ್ಶಿರ್ ಅವರ ದೊಡ್ಡಪ್ಪನ ಮಗನ ವಿವಾಹವು ಜ.3ರಂದು ಕಾಟಿಪಳ್ಳದಲ್ಲಿ ನೆರವೇರಿತ್ತು.

ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ ದ್ವಿಚಕ್ರ ವಾಹನದಲ್ಲಿ ಕಾಟಿಪಳ್ಳದಿಂದ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಸುರತ್ಕಲ್ ಬಳಿ ದುಷ್ಕರ್ಮಿಗಳ ತಂಡವು ದ್ವಿಚಕ್ರ ವಾಹನವನ್ನು ತಡೆದು ತಲವಾರಿನಿಂದ ದಾಳಿ ನಡೆಸಿತ್ತು. ಇದರಿಂದ ಮುಬಶ್ಶಿರ್ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English