ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭ

4:03 PM, Thursday, January 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

dharmastalaಉಜಿರೆ: ಅತಿಯಾದ ಸುಖ-ಭೋಗದಿಂದ ವ್ಯಕ್ತಿತ್ವ ನಾಶವಾಗುತ್ತದೆ. ಮನುಷ್ಯ ಸತ್ಯ, ಧರ್ಮ, ನ್ಯಾಯದಿಂದ ವಿಚಲಿತನಾಗಿ ಅಧರ್ಮ, ಅನ್ಯಾಯದ ಮಾರ್ಗವನ್ನು ಅನುಸರಿಸುತ್ತಾನೆ. ತ್ಯಾಗ ಜೀವನದಿಂದ ಭೋಗ ಜೀವನದ ಕಡೆಗೆ ಸಾಗುತ್ತಾನೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ದಾಸರಾಗಬಾರದು.

ಮಾಲಕರಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ನಡೆದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಕೇಂದ್ರ ಸಮಿತಿಯ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

dharmastala-2ಕೇವಲ ಹಣ ಕೊಡುವುದರಿಂದ ಪರಿವರ್ತನೆ ಆಗುವುದಿಲ್ಲ. ಹಣದ ಸದ್ವಿನಿಯೋಗದ ಬಗ್ಯೆ ಕಲಿಸಿದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯವಾಗುತ್ತದೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ ನಮ್ಮ ದೈನಂದಿನ ವ್ಯವಹಾರದಲ್ಲಿ ಆಧುನಿಕತೆ ಅಳವಡಿಸಿದಾಗ ಸುಂದರ ಭವಿಷ್ಯದ ಬಗ್ಯೆ ಉನ್ನತ ಸಾಧನೆ ಬಗ್ಯೆ ಕಲ್ಪನೆ ಹಾಗೂ ಚಿಂತನೆ ಮಾಡಲು ಸಾಧ್ಯವಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸರ್ಕಾರ ಮತ್ತು ಯೋಜನೆಯಿಂದ ಸಿಗುವ ಸವಲತ್ತು ಸೌಲಭ್ಯಗಳ ಸದುಪಯೋಗ ಪಡೆದು ಸ್ವಾವಲಂಬನೆಯೊಂದಿಗೆ ಪ್ರಗತಿ ಸಾಧಿಸಲಾಗಿದೆ.

ಹಣದ ಸದ್ವಿನಿಯೋಗದೊಂದಿಗೆ ಲಾಭಾಂಶ ಗಳಿಸಿ ಯೋಜನೆಯು ಇಡಿ ರಾಷ್ಟ್ರದ ಗಮನ ಸೆಳೆದಿದೆ. ಪ್ರಧಾನಿ ಮೋದಿಯವರೆ ಈ ಬಗ್ಯೆ ಮುಕ್ತ ಪ್ರಶಂಸೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯ ಪಟ್ಟರು.ಸ್ವ-ಸಹಾಯ ಸಂಘದ ಸದಸ್ಯರೆಲ್ಲರೂ ಹಲವು ಮಕ್ಕಳ ತಾಯಿಯಂತೆ ನಡೆದುಕೊಂಡು ಉನ್ನತ ಸಾಧನೆ ಮಾಡಬೇಕೆಂದು ಅವರು ಸಲಹೆ ನೀಡಿದರು.

ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ, ದುಡಿಮೆ ನಮ್ಮ ಸಂಸ್ಕೃತಿಯಾಗಿದೆ. ಯಾವುದೇ ಕೆಲಸದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಯಶಸ್ಸು ಪಡೆಯಬಹುದು ಎಂದು ಹೇಳಿದರು.ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆಯೊಂದಿಗೆ, ವ್ಯವಹಾರ ಕುಶಲತೆ, ಆತ್ಮ ವಿಶ್ವಾಸ, ನಾಯಕತ್ವ, ಆತ್ಮ ಗೌರವ ಹೆಚ್ಚಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಜಾತಿ – ಮತ ಬೇಧವಿಲ್ಲದೆ ಕೋಮು ಸಾಮರಸ್ಯ ಕಾಪಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

dharmastala-3ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕ ಎನ್. ಎಸ್. ಸೋಮಯಾಜಿ ಶುಭಾಶಂಸನೆ ಮಾಡಿ ಗ್ರಾಮಾಭಿವ್ರದ್ದಿ ಯೋಜನೆ ಮೂಲಕ ಆದ ಸಾಧನೆ-ಪ್ರಗತಿಯನ್ನು ಶ್ಲಾಘಿಸಿ ಅಭಿನಂದಿಸಿದರು.ಪ್ರಗತಿ ಬಂಧು ಒಕ್ಕೂಟದ ನಿರ್ಗಮನ ಅಧ್ಯಕ್ಷ ಮೋನಪ್ಪ ಗೌಡ ಮತ್ತು ನೂತನ ಅಧ್ಯಕ್ಷ ಪ್ರಭಾಕರ ಪೊಸಂದೋಡಿ ಒಕ್ಕೂಟದ ಪ್ರಗತಿಯಲ್ಲಿ ಸದಸ್ಯರ ಸಹಕಾರವನ್ನು ಶ್ಲಾಘಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ ಅಧುನಿಕ ತಂತ್ರಜ್ಞಾನದ ಮೂಲಕ ಯೋಜನೆಯ ಕೆಲಸವನ್ನು ಸುಲಭದಲ್ಲಿ, ಶೀಘ್ರವಾಗಿ ಮಾಡಲಾಗುತ್ತದೆ. ಫಲಾನುಭವಿಗಳ ಉಳಿತಾಯವನ್ನು ಭದ್ರತೆಯಾಗಿ ಪರಿಗಣಿಸಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ವರ್ಷಕ್ಕೆ 140 ಕೋಟಿ ರೂ. ಸಾಲ ನೀಡಲಾಗುತ್ತಿದೆ. ಸ್ವ-ಸಹಾಯ ಸಂಘಗಳು ಸ್ವಾಯತ್ತತೆ ಸಾಧಿಸಿವೆ ಎಂದು ಹೇಳಿದರು.

ಸಿಂಡಿಕೇಟ್ ಬ್ಯಾಂಕ್ ಶೇ. ೧೫ರ ಬಡ್ಡಿ ದರದಲ್ಲಿ ಸೇವಾ ಶುಲ್ಕ ರಹಿತವಾಗಿ ಸಾಲ ನೀಡಲು ಒಪ್ಪಿದೆ ಎಂದು ಅವರು ಪ್ರಕಟಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಚಂದ್ರಶೇಖರ ಗೌಡ ಸ್ವಾಗತಿಸಿದರು. ಯೋಜನಾಧಿಕಾರಿ ಜಯಕರ ಶೆಟ್ಟಿ ಧನ್ಯವಾದವಿತ್ತರು. ಕೃಷಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English