ಟಿಕೇಟ್ ದರ ಇಳಿಕೆ: ಬಿಎಂಟಿಸಿ ವೋಲ್ವೋಗೆ ನಿರೀಕ್ಷೆಗೂ ಮೀರಿ ಆದಾಯ

1:39 PM, Tuesday, January 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ticketಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್ ಇದೀಗ ನಿಗಮಕ್ಕೆ ಆದಾಯ ಹೊತ್ತು ತರುತ್ತಿದೆ. ಜನವರಿ 1 ರಿಂದ ವೋಲ್ವೋ ಬಸ್ ಟಿಕೇಟ್ ದರ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಕಳೆದ ಎಂಟು ದಿನಗಳಲ್ಲಿ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. ಸುಮಾರು 25 ಲಕ್ಷ ರೂ ಹೆಚ್ಚುವರಿ ಆದಾಯ ಬಂದಿದೆ. ಟಿಕೇಟ್ ದರ ಇಳಿಕೆಯಿಂದ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ, ಆದಾಯದಲ್ಲೂ ಹೆಚ್ಚಳವಾಗಿದೆ. ವಜ್ರ ಬಸ್ ಗಳಲ್ಲಿ ಕನಿಷ್ಠ 15 ರೂ ಯಿಂದ ಗರಿಷ್ಠ 45 ರೂ ವರೆಗೂ ಟಿಕೇಟ್ ದರ ಕಡಿತವಾಗಿದೆ.

ವೋಲ್ವೊ ಬಸ್ ಸಂಚಾರ ಇನ್ನು ಸುಗಮ: ಶೇ.37ರಷ್ಟು ದರ ಇಳಿಕೆ ಪ್ತಯಾಣಿಕರ ಸಂಖ್ಯೆ ಏರಿಕೆ: ಬಿಎಂಟಿಸಿ ನಗರದಲ್ಲಿ ನಿತ್ಯ 650 ವೋಲ್ವೋ ಬಸ್ ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ಪೈಕಿ 110 ಬಸ್ ಗಳು ನಗರ ನಾನಾ ಭಾಗಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿದೆ.

ಟಿಕೇಟ್ ದರ ಕಡಿತಕ್ಕೂ ಮುನ್ನ ವೋಲ್ವೋ ಬಸ್ ಗಳಲ್ಲಿ ನಿತ್ಯ 58 ಸಾವಿರ ಮಂದಿ ಪ್ರಯಾಣಿಕರು ಸಂಚರಸುತ್ತಿದ್ದರು. ದರ ಇಳಿಕೆ ಬಳಿಕ ಈ ಸಂಖ್ಯೆ 84 ಸಾವಿರಕ್ಕೆ ಏರಿಕೆಯಾಗಿದೆ. ಈ ಮೂಲಕ 25 ಸಾವಿರ ಮಂದಿ ಸಾರ್ವಜನಿಕರು ಹೊಸದಾಗಿ ವೋಲ್ವೋ ಬಸ್ ಪ್ರಯಾಣಿಕರಾಗಿ ಸೇರ್ಪಡೆಯಾಗಿದ್ದಾರೆ.

ಟಿಖೇಟ್ ದರ ಇಳಿಕೆಗೂ ಹಿಂದಿನ ಎಂಟು ದಿನ 3.80 ಕೋಟಿ ಆದಾಯ ಬಂದಿತ್ತು. ಜನವರಿ 1 ರಿಂದ 8 ರವರೆಗೆ ಸುಮಾರು 4 ಕೋಟಿ ರೂ ಮಿಕ್ಕು ಆದಾಯ ಬಂದಿದೆ. ಈ ಮೂಲಕ ಆದಾಯದಲ್ಲಿ ಸುಮಾರು 25 ಲಕ್ಷ ಏರಿಕೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಐಟಿಪಿಎಲ್, ಕೆಐಎಎಲ್ ಮಾರ್ಗದ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English