ಆಡಿಟರ್‌ ಜೊತೆ ಚರ್ಚಿಸಿ ಇಡಿ ನೋಟಿಸ್‌ಗೆ ಉತ್ತರ: ರೋಷನ್‌ ಬೇಗ್‌

6:07 PM, Tuesday, January 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Roshan-baigಬೆಂಗಳೂರು: ವಿದೇಶಿ ವಿನಿಯಮ ಕಾಯ್ದೆ ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯ ತಮ್ಮ ಕುಟುಂಬಕ್ಕೆ ನೀಡಿರುವ ನೋಟಿಸ್‌ಗೆ ಆಡಿಟರ್ ಜೊತೆ ಚರ್ಚಿಸಿ ಸೂಕ್ತ ಉತ್ತರ ನೀಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್ ನನ್ನ ಕೈಗೆ ಇನ್ನು ಸಿಕ್ಕಿಲ್ಲ. ಅದಾಗಲೇ ಇಡಿ ನೋಟಿಸ್ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. ಇದನ್ನ ಜನರೇ ಅರ್ಥ ಮಾಡಿಕೊಳ್ಳಬೇಕು ಎಂದು ಮಾಧ್ಯಮಗಳ ವರದಿಗೆ ಅಸಮಾಧಾನ ವ್ಯಕ್ತಪಡಿಸಿದರು.

ನನಗೆ ನೋಟಿಸ್ ಬಂದಿಲ್ಲ. ಆದರೆ, ನನ್ನ ಮಗನ ಕಂಪನಿ ವಿಚಾರ ಸಂಬಂಧ‌ ನನ್ನ ಮಗನಿಗೆ ನೋಟಿಸ್ ಬಂದಿದೆ. ಇದರಲ್ಲಿ ನನಗೆ ಶಾಕ್ ಏನು ಆಗಿಲ್ಲ. ಆಡಿಟರ್ ಜೊತೆ ಚರ್ಚೆ ಮಾಡುತ್ತಿದ್ದೇನೆ. ಬಳಿಕ ನೋಟಿಸ್‌ಗೆ ಉತ್ತರ ನೀಡುತ್ತೇನೆ ಎಂದರು.

ಕಳೆದ ಎರಡು ವರ್ಷದ ಹಿಂದೆಯೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನಗೆ ನೋಟಿಸ್ ನೀಡಿದ್ದರು. ಆಗಲೂ ನಾನು ಆಡಿಟರ್ ಜೊತೆ ಚರ್ಚೆ ನಡೆಸಿ ಇಡಿ ನೋಟಿಸ್‌ಗೆ ಉತ್ತರ ನೀಡಿದ್ದೆ,ಈಗಲೂ ಆಡಿಟರ್ ಜೊತೆ ಚರ್ಚೆ ನಡೆಸಿ ಸೂಕ್ತ ಉತ್ತರ ನೀಡುತ್ತೇನೆ. ಆದರೆ ಚುನಾವಣೆ ಹೊಸ್ತಿಲಲ್ಲಿ ನೋಟಿಸ್ ನೀಡಿರುವ ಬಗ್ಗೆ ಜನರಿಗೆ ಅರ್ಥವಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English