ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆಯ ಹಿಂದೆ ಸಂಘಪರಿವಾರದ ಪಾತ್ರವಿದೆ : ಮುನೀರ್ ಕಾಟಿಪಳ್ಳ

11:36 AM, Wednesday, January 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

munir-katipallaಮಂಗಳೂರು: ಜಿಲ್ಲೆಯಲ್ಲಿ ನಡೆಯುವ ಪ್ರತೀಕಾರದ ಕೊಲೆಯ ಹಿಂದೆ ರಾಜಕೀಯ ಪಕ್ಷಗಳ ಹುನ್ನಾರವಿದೆ. ಧರ್ಮದ ಆಧಾರದಲ್ಲಿ ಜನರನ್ನು ಧ್ರುವೀಕರಿಸುವ ಕೆಲಸವಾಗುತ್ತಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಅವರು ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಎಡ ಮತ್ತು ಜಾತ್ಯತೀತ ಪ್ರಜಾಪ್ರಭುತ್ವ ಸಂಘಗಳಿಂದ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

munir-katipalla-2ಇದನ್ನು ಸಮಾಜ ಸಂಘಟಿತವಾಗಿ ಪ್ರತಿರೋಧಯೊಡ್ಡಬೇಕಾಗಿದೆ. ಸಾಂಕೇತಿಕ ಸೌಹಾರ್ದದಿಂದ ಶಾಂತಿ ಸ್ಥಾಪಿಸುವುದಕ್ಕಿಂತ ಮುಖ್ಯವಾಗಿ ಜಾತ್ಯತೀತ ಸೌಹಾರ್ದ ನಂಬಿಕೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ ಎದು ಅವರು ಹೇಳಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆಗಳ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಶಿಕ್ಷಿಸುವ ಕೆಲಸವಾಗಬೇಕು. ಯುವಕರ ತಲೆಗೆ ಧರ್ಮದ ಅಮಲು ತುಂಬಿಸಿ ಸಮಾಜದಲ್ಲಿ ಸಂಘರ್ಷ ಹುಟ್ಟುಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲಾ ಸಬ್‌ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳು ಕೋಮುಗಲಭೆಯ ಆರೋಪಿಗಳಿಂದ ತುಂಬಿ ಹೋಗಿದೆ. ಜನರಲ್ಲಿ ಸೌಹಾರ್ದತೆಯನ್ನು ಸೃಷ್ಟಿಸುವ ಕೆಲಸವಾಗಬೇಕೆ ಹೊರತು ಕೋಮುಸಂಘರ್ಷ ಬಿತ್ತುವ ಕೆಲಸ ಒಳ್ಳೆಯದಲ್ಲ ಎಂದು ಹೇಳಿದರು.

munir-katipalla-3ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ್ ಶೆಟ್ಟಿ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆಯ ಹಿಂದೆ ಸಂಘಪರಿವಾರದ ಪಾತ್ರವಿದೆ. ಯುವಕರನ್ನು ಕಮ್ಯುನಲ್ ಮುಖೇನ ಕ್ರಿಮಿನಲ್‌ಗೆ ಪ್ರಚೋದಿಸುವ ಕೆಲಸವಾಗುತ್ತಿದೆ. ಸಂಘ ಪರಿವಾರದ ಪ್ರಚೋದನಾತ್ಮಕ ಭಾಷಣದ ಕುಮ್ಮಕ್ಕಿನಿಂದ ಗಲಭೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಜೆಡಿಎಸ್ ಮುಖ್ಯಸ್ಥ ವಸಂತ್ ಪೂಜಾರಿ, ಮುನೀರ್ ಮುಕ್ಕಚ್ಚೇರಿ, ರಾಮ್‌ಗಣೇಶ್, ಸಿಪಿಎಂನ ವಸಂತ್ ಆಚಾರಿ, ಸುನೀಲ್ ಕುಮಾರ್ ಬಜಾಲ್, ಬಾಲಕೃಷ್ಣ ಶೆಟ್ಟಿ, ಸಿಪಿಐನ ವಿ.ಕೆ. ಕುಕ್ಯಾನ್, ಸೀತಾರಾಮ ಬೇರಿಂಜೆ, ಹೆಚ್‌ವಿ ರಾವ್, ಮಾನವ ಬಂಧುತ್ವ ವೇದಿಕೆಯ ಕೇಶವ ಧರಣಿ, ದಲಿತ ಸಂಘರ್ಷ ಸಮಿತಿಯ ರಘು ಎಕ್ಕಾರು, ಕಮಲಾಕ್ಷ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English