ಮಂಗಳೂರು: ಕಾವೂರಿನ ದೀಪಕ್ (25) ಎಂಬಾತ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳ ಬಳಿಯ ಅಂಗಡಿಯೊಂದರ ಬಳಿ ಕಾಡು ಗಿಳಿಗಳನ್ನು ಅಕ್ರಮವಾಗಿ ಮಾರಾಟ ಮಾಡುತಿದ್ದ ವೇಳೆ ಬುಧವಾರ ಮಂಗಳೂರು ಅರಣ್ಯ ಸಂಚಾರಿ ದಳದ ವಿಶೇಷ ಪೊಲೀಸರು ಪತ್ತೆ ಹಚ್ಚಿ ಆತನ ಬಳಿ ಇದ್ದ ಹಸಿರು ಬಣ್ಣದ 13 ಕಾಡು ಗಿಳಿಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿ ದೀಪಕ್ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ. ಈ ಗಿಳಿಗಳನ್ನು ಕಾಸರಗೋಡಿನ ವ್ಯಕ್ತಿಯೊಬ್ಬರು ಪೂರೈಕೆ ಮಾಡಿರುವುದಾಗಿ ಆತ ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಅರಣ್ಯ ಸಂಚಾರಿ ದಳದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅಪರಾಹ್ನ 3 ಗಂಟೆ ವೇಳೆಗೆ ಪಿಎಸ್‌ಐ ಮಂಜುನಾಥ ಕೆ. ಆರ್. ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ. ಸಿಬಂದಿ ಉಮೇಶ್ ಹೊಸಳಿಕೆ, ಸೀತಾರಾಮ್ ಕೆ., ನಾರಾಯಣ, ಹೊನ್ನಪ್ಪ ಗೌಡ, ಬಶೀರ್, ರಾಮಚಂದ್ರ, ಹರೀಶ್ ಭಾಗವಹಿಸಿದ್ದರು.
ಅರಣ್ಯ ಸಂಚಾರಿ ದಳದ ಪೊಲೀಸರು ಆರೋಪಿಯನ್ನು ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
Click this button or press Ctrl+G to toggle between Kannada and English
September 16th, 2011 at 21:21:44
ನಿಮ್ಮ ನ್ಯೂಸ್ ನೋಡಿ ನನಗೆ ಆಶ್ಚರ್ಯ ಮಂಗಳೂರಿನಲ್ಲಿ ಗಿಳಿ ಮಾರುವವರು ಇದ್ದಾರ
September 16th, 2011 at 21:17:56
ಪಕ್ಷಿ ಕಳ್ಳರನ್ನು ಬಂಧಿಸದಿದ್ದಲ್ಲಿ ವನ್ಯಜೀವಿಗಳಿಗೆ ಅಪಾಯ ತಪ್ಪಿದಲ್ಲ