ಬಿಪಿಎಲ್ ಕಾರ್ಡ್ ಸಮಸ್ಯೆ ಬಗೆಹರಿಸಿದ ಶ್ರೇಯಸ್ಸು ನಮ್ಮದು: ಖಾದರ್

3:04 PM, Friday, January 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

u-t-kaderಮಂಗಳೂರು :ಹಿಂದಿನ ಬಿಜೆಪಿ ಸರ್ಕಾರ ಬಿಪಿಎಲ್ ಕಾರ್ಡ್ ಸರಿಯಾಗಿ ವಿತರಿಸಿಲ್ಲ ಹಾಗಾಗಿ ಸಾಕಷ್ಟು ಗೊಂದಲಗಳು ಉಂಟಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರ 33 ಲಕ್ಷ 70 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೂವರೆ ಕೋಟಿ ಜನರು ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ ಎಲ್ಲವನ್ನೂ ಪಾರದರ್ಶಕ ಅನ್ ಲೈನ್ ವ್ಯವಸ್ಥೆಯಡಿ ತಂದಿದ್ದೇವೆ ಲಕ್ಷಾಂತರ ಬೋಗಸ್ ಕಾರ್ಡ್ ಪತ್ತೆಹಚ್ಚಿದ್ದೇವೆ ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿತಾಯ ಮಾಡಿದ್ದೇವೆ ಕನ್ನಭಾಗ್ಯ ಆರೋಪಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದರು.

‘ಬಿಜೆಪಿಗೆ ಬಡವರ ಕಾಳಜಿಯಿದ್ದರೆ ದೇಶಾದ್ಯಂತ ಅನ್ನಭಾಗ್ಯ ಕೊಡಲಿ’ ರಾಜ್ಯ ಆಹಾರ ಇಲಾಖೆಗೆ ರಾಷ್ಟ್ರ ಮಟ್ಟದ ಅವಾರ್ಡ್ ಬಂದಿದೆ ಜನಜಾಗೃತಿ,ಪಡಿತರ ವಿತರಣೆಗಾಗಿ ಅವಾರ್ಡ್ ಬಂದಿದೆ ಹಿಂದಿನ ಸಚಿವರು,ಇಲಾಖೆಯ ಎಲ್ಲ ಸಿಬ್ಬಂದಿಗಳ ಶ್ರಮಕ್ಕೆ ಈ ಪ್ರಶಸ್ತಿ ಸಲ್ಲುತ್ತದೆ. ಗುಜರಾತ್, ಛತ್ತೀಸ್ ಘಡ,ಯುಪಿಯಲ್ಲಿ ಬಿಜೆಪಿ ಸರ್ಕಾರವಿದೆ ಆದರೆ ಬಿಜೆಪಿ ಸರ್ಕಾರದಲ್ಲಿ ಇಂತ ಉತ್ತಮ ಯೋಜನೆಯಿಲ್ಲ ಅನ್ನಭಾಗ್ಯದಂತ ಯೋಜನೆ ಸೌಲಭ್ಯವಿಲ್ಲ ದೇಶದಲ್ಲಿ ಕರ್ನಾಟಕ ಮಾದರಿಯಾಗಿದೆ.

ಏಳು ಕೆಜಿ ಪ್ರತಿಯೊಬ್ಬರಿಗೆ ನೀಡುತ್ತಿದ್ದೇವೆ ಇದು ಬಿಜೆಪಿ ರಾಜ್ಯಗಳಲ್ಲಿ ಇದೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಕ್ತ ಅಂತ ಹೇಳುತ್ತಾರೆ ಆದರೆ ನಾವು ಹಾಗೆ ಹೇಳುವುದಿಲ್ಲ ಬಿಜೆಪಿ ಮುಕ್ತ, ಜೆಡಿಎಸ್ ಮುಕ್ತ ಎಂದು ಹೇಳುವುದಿಲ್ಲ ಅವರನ್ನೂ ಜೊತೆಯಾಗಿಯೇ ಕರೆದೊಯ್ಯುವ ಪ್ರಯತ್ನ ನಮ್ಮದು ದಾಸೋಹ ಯೋಜನೆ ಹಮ್ಮಿಕೊಂಡಿದ್ದೇವೆ ವಸತಿ ಮತ್ತು ಊಟ ಒದಗಿಸುವ ಯೋಜನೆ ಕೂಡ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಮಹದಾಯಿ ನದಿ ನೀರು‍ ಹಂಚಿಕೆ ವಿಚಾರ ಟ್ರಿಬ್ಯೂನಲ್ ನಲ್ಲಿ ಲೆಟರ್ ಬರೆಯಬೇಕು, ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ಗೆ ಎರಡು ಬಾರಿ ಪತ್ರ ಬರೆದಿದ್ದಾರೆ.

ಆದರೆ ಗೋವಾ ಸಿಎಂ ಒಂದು ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಮನೆಯಲ್ಲಿ ಸಭೆ ಮಾಡಿದ್ದಾರೆ ಆದರೆ ಏನು ಪ್ರಯೋಜನವಾಗಿಲ್ಲ. ಅದರ ಬದಲಾಗಿ ಗೋವಾ ಸಚಿವರು ಕನ್ನಡಿಗರ ಬಗ್ಗೆಯೇ ಕೆಟ್ಟ ಮಾತನ್ನಾಡಿದ್ದಾರೆ ಇದರಿಂದ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English