ಉಡುಪಿ: ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದರು. ಶ್ರೀಕೃಷ್ಣ ಮಠದಲ್ಲಿ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪರ್ಯಾಯ ಪೂಜಾಧಿಕಾರವನ್ನು ವಹಿಸಿಕೊಂಡ ದಿನ ಗುರುವಾರವೇ ಜ್ಞಾನಸತ್ರ ಮತ್ತು ಸ್ವಚ್ಛತಾ ಅಭಿಯಾನ ಉದ್ಘಾಟನೆಗೊಂಡ ಸಂದರ್ಭ ಪರ್ಯಾಯ ಶ್ರೀಗಳು ವಿದ್ಯೆ, ಕಾನೂನು, ಉದ್ಯೋಗ, ಆರೋಗ್ಯ ಸೇವೆಗಳು ಎಲ್ಲರಿಗೂ ಒಂದೇ ತೆರನಾಗಿ ಸಿಗುವಂತಹ ಸಮಾನ ನಾಗರಿಕ ಸಂಹಿತೆ ಜಾರಿ ಗೊಳ್ಳಬೇಕು ಎಂದು ಹಾರೈಸಿದಾಗ ಸಚಿವರು ಈ ರೀತಿ ಪ್ರತಿಕ್ರಿಯೆ ನೀಡಿದರು.
ದೇಶಕ್ಕೆ ಒಂದು ಕಾನೂನು ತರುವುದು ಅಷ್ಟು ಸುಲಭ ಅಲ್ಲ , ಅನೇಕ ರೀತಿಯ ಅಡ್ಡಿ , ಆತಂಕಗಳು ಬರುತ್ತವೆ. ಅದಕ್ಕೆ ದೊಡ್ಡ ತಪಸ್ಸಿನ ಅಗತ್ಯವಿದೆ. ಅಂಥ ಆಶಯ ವ್ಯಕ್ತಪಡಿಸಿದ ಸ್ವಾಮೀಜಿ ಅವರ ಅಂತರಾಳವನ್ನು ನಾವು ಅರ್ಥ ಮಾಡಿಕೊಳ್ಳ ಬೇಕು. ಈ ದಾರಿಯಲ್ಲಿ ದೊಡ್ಡ ಅಡೆತಡೆಗಳು ಇದ್ದರೂ ಆ ಸಂಕಲ್ಪ ಹೊತ್ತು ಮುಂದೆ ಸಾಗಬೇಕು ಎಂದು ಹೆಗಡೆ ಹೇಳಿದರು.
ಅಮೆರಿಕ ಎಷ್ಟು ವರ್ಷಗಳಿಂದ ಅಸ್ತಿತ್ವ ದಲ್ಲಿದೆ? ಮಾಧ್ವ ಮತಕ್ಕೆ ಸಾವಿರ ವರ್ಷ ಗಳ ಇತಿಹಾಸವಿದೆ. ಇತಿಹಾಸಕಾರರು ಜಗತ್ತಿಗೆ 5,000 ವರ್ಷ ಎನ್ನುತ್ತಾರೆ. ಲೆಕ್ಕ ಗೊತ್ತಿಲ್ಲದವರು ಮಾತ್ರ ಹೀಗೆ ಹೇಳುತ್ತಾರೆ. ಮತೀಯವಾದಗಳಿಂದ ಪಾರಾಗಲು ನಮ್ಮ ಮಹಾಪುರುಷರು ವೀರ ಸಂದೇಶವನ್ನು ಕೊಟ್ಟಿದ್ದಾರೆ. ರಾಜ ಮಹಾರಾಜರು ದೇಶವನ್ನು ಕಟ್ಟಿದ್ದಲ್ಲ, ಬದಲಾಗಿ ಸಂತ ಪರಂಪರೆಯವರು ಸಂಸ್ಕೃತಿ, ದೇಶವನ್ನು ಕಟ್ಟಿದರು. ಪೂಜೆ ಮಾಡುವುದೋ ಲಾಂಛನ ಧರಿ ಸುವುದೋ ಧರ್ಮ ಎಂದು ತಿಳಿದು ಕೊಂಡಿದ್ದಾರೆ. ಒಬ್ಬ ವ್ಯಕ್ತಿ ಹೇಳಿದ ವ್ಯಾಖ್ಯಾನವನ್ನು ಒಪ್ಪಲು ಸಾಧ್ಯವಿಲ್ಲ. ಹೀಗೆ ಹೇಳಿದಾಗ ನಮ್ಮಲ್ಲಿ ಅನೇಕ, ಬಹುಬಗೆಯ ದೇವರು, ಧರ್ಮಗಳು ಇವೆ ಎನ್ನುತ್ತಾರೆ. ಇದುವೇ ನಮ್ಮ ಬಲ ಎಂದು ಹೆಗಡೆ ಹೇಳಿದರು.
ಉಡುಪಿ ನಗರ ನಂಬರ್ 1 ನಗರವಾಗಿ ರೂಪುಗೊಳ್ಳಬೇಕು. ಗ್ರೇಟರ್ ರಥಬೀದಿಯಾಗಬೇಕು. ಇದಕ್ಕಾಗಿ ತಾವು ಮತ್ತು ಪಲಿಮಾರು ಶ್ರೀಗಳು ಜಂಟಿ ಯಾಗಿ ಪ್ರಯತ್ನಿಸಲಿದ್ದೇವೆ. ಅಮೆರಿಕದಲ್ಲಿ ಎರಡು ನಗರಗಳನ್ನು ಸಿಸ್ಟರ್ ಸಿಟಿ ಎಂದು ಜೋಡಿಸಿ ಅಭಿವೃದ್ಧಿಯಲ್ಲಿ ಪರಸ್ಪರ ವಿನಿಮಯ ಮಾಡಿ ಕೊಳ್ಳುತ್ತಾರೆ.
ಅದೇ ರೀತಿ ಅಮೆರಿಕದ ಒಂದು ನಗರದೊಂದಿಗೆ ಉಡುಪಿ ನಗರ ವನ್ನು ಸಂಪರ್ಕಿಸುವ ಪ್ರಯತ್ನ ಮಾಡುವ ಕಲ್ಪನೆ ಇದೆ ಎಂದು ಸ್ವತ್ಛತಾ ಅಭಿಯಾನ ಉದ್ಘಾಟಿಸಿದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು. ಸ್ವತ್ಛತಾ ಅಭಿಯಾನದ ಯಂತ್ರಕ್ಕೆ 9 ಲ.ರೂ. ಚೆಕ್‌ನ್ನು ಪಲಿಮಾರು ಶ್ರೀಗಳಿಗೆ ಪುತ್ತಿಗೆ ಶ್ರೀಗಳು ನೀಡಿದರು.
ದ್ವಾರಕೆಯಲ್ಲಿದ್ದ ಕೃಷ್ಣ ಮಧ್ವಾ ಚಾರ್ಯರ ಭಕ್ತಿಗೊಲಿದು ರಜತ ಪೀಠ ಪುರವೆಂಬ ಉಡುಪಿಗೆ ಬಂದು ನೆಲೆಸಿದ. ಪಲಿಮಾರು ಶ್ರೀಗಳು ಪ್ರವಚನ- ಕೀರ್ತನ (ನಿರಂತರ ಭಜನೆ)- ಅರ್ಚನ (ತುಳಸಿ ಅರ್ಚನೆ) ಮೂಲಕ ವಿಶೇಷ ವಾಗಿ ಆರಾಧನೆಗೆ ತೊಡಗಿದ್ದು ಅವರ ದ್ವಿತೀಯ ಪರ್ಯಾಯ ಅದ್ವಿತೀಯವಾಗಲಿ ಎಂದು ಜ್ಞಾನಸತ್ರ ಉದ್ಘಾಟಿಸಿದ ಶ್ರೀ ಭಂಡಾರ ಕೇರಿ ಮಠದ ಶ್ರೀ ವಿದ್ಯೆಶ ತೀರ್ಥ ಶ್ರೀಪಾದರು ಹಾರೈಸಿದರು. ಸ್ವತಃ ದಾಸರಾಗಿ ಹಾಡುಗಳನ್ನು ರಚಿಸುವ ಭಂಡಾರ ಕೇರಿ ಶ್ರೀಗಳು ಶ್ಲೋಕಗಳನ್ನು ರಚಿಸಿ ವಿವರಿಸಿದರು. ಇವರ ಹಾಡೊಂದನ್ನು ಧ್ವನಿಮುದ್ರಿಕೆ ಮೂಲಕ ಬಿತ್ತರಿಸಲಾಯಿತು.
ಪ್ರಯಾಗ ಮಠದ ಶ್ರೀ ವಿದ್ಯಾತ್ಮ ತೀರ್ಥ ಶ್ರೀಪಾದರು, ಭೀಮ ಜುವೆಲರ್ ನಿರ್ದೇಶಕ ವಿಷ್ಣುಶರಣ್, ಮಧ್ಯಪ್ರದೇಶದ ಮಾಜಿ ಸಚಿವ ನಾಗೇಂದ್ರ, ಉತ್ತರ ಭಾರತದ ಕರ್ನಾಟಕ ಮಾತಾ, ತಿರುಪತಿ ತಿರುಮಲ ದೇವ ಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮೊದ ಲಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಸ್ವಾಗತಿಸಿದರು.
Click this button or press Ctrl+G to toggle between Kannada and English