ಆಳ್ವಾಸ್ ಕಾಲೇಜಿನಲ್ಲಿ ಮೆಮೊರಿ ಥೆರಪಿ ಕಾರ್ಯಾಗಾರ

3:50 PM, Saturday, January 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

alwasಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ಮೆಮೊರಿ ಥೆರಪಿ’ ಕುರಿತ ಕಾರ್ಯಗಾರವು ಮಾನವಿಕ ಸಂಘ ಮತ್ತು ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆಯಿತು.

ಸ್ವರೂಪ ಅಧ್ಯಯನ ಕೇಂದ್ರದ ಸ್ಥಾಪಕ ಗೋಪಾಡ್‌ಕರ್ ಸಂಪನ್ಮೂಲ ವ್ಯಕ್ತಿಯಾಗಿಯಾಗಿದ್ದರು. ಪುಸ್ತಕ ವಿದ್ಯೆ ಎಂಬ ಪೂರ್ವಗ್ರಹ ಪೀಡಿತ, ಅಂಕಗಳಿಗೆ ಮಾತ್ರ ಮೀಸಲಿಟ್ಟು ನಂತರ ಮರೆಯುವಂತಹ ವಿದ್ಯೆಯಿಂದ ವಿದ್ಯಾರ್ಥಿಗಳನ್ನು ಹೊರತರುವುದಾಗಿದೆ ಅವರ ಪ್ರಕಾರ ವಿದ್ಯೆಯು ಮನೋರಂಜನೆಯ ಮೂಲಕ ಗಳಿಸಬೇಕದ್ದಾಗಿದೆ. ಹಾಗೂ ಅಂತಹ ವಿದ್ಯೆಯು ನಮ್ಮಲ್ಲಿ ಕೊನೆಯವರೆಗೂ ಉಪಯೋಗಕ್ಕೆ ಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಕೆಯನ್ನು ಖುಷಿಪಡುವಂತಾಬೇಕು ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ರಮೇಶ್.ಬಿ ರವರು ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದರು.ಆಳ್ವಾಸ್ ವಿದ್ಯಾ ಸಂಸ್ಥೆಯ ಸಿವಿಲ್ ಸರ್ವಿಸ್ ಅಕಾಡೆಮಿಯ ಸಂಯೋಜಕ ಡಾ.ಅಶೋಕ್ ಡಿ’ಸೋಜ, ಮಾನವಿಕ ಸಂಘದ ಸಂಯೋಜಕರು, ರಾಜ್ಯಶಾಸ್ತ್ರ ಉಪನ್ಯಾಸಕ ನಾಗರಾಜ್ ಎಂ, ಸಹ ಸಂಯೋಜಕಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಶ್ರಿ, ಕಾರ್ಯದರ್ಶಿ ಮೊಹಮ್ಮದ್ ಸಯೀದ್, ಜೊತೆ ಕಾರ್ಯದರ್ಶಿ ಪ್ರಜ್ವಲ್ ಡಿ’ಸೋಜ ಉಪಸ್ಥಿತರಿದ್ದರು.

ಅರ್ಫತ್ ಅಲಿ ಸ್ವಾಗತಿಸಿದರು. ಪವಿತ್ರ ತೇಜ್ ಕಾರ್ಯಕ್ರನಿರೂಪಿಸಿದರು. ಶಿವಾನಿ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English