ತುಳು ಚಿತ್ರ ನಿರ್ಮಾಪಕ ವಿಜಯುಕಮಾರ್‌ ಕೊಡಿಯಾಲ್‌ಬೈಲ್‌ ಜೊತೆ ಪತ್ರಿಕಾ ಸಂವಾದ

11:07 PM, Friday, September 16th, 2011
Share
1 Star2 Stars3 Stars4 Stars5 Stars
(No Ratings Yet)
Loading...

Asal Film

ಮಂಗಳೂರು: ದ.ಕ. ಜಿಲ್ಲಾ ಪತ್ರಕರ್ತರ ಸಂಘ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ, ರಂಗ ನಿರ್ದೇಶಕ ವಿಜಯುಕಮಾರ್‌ ಕೊಡಿಯಾಲ್‌ಬೈಲ್‌ ಮಾತನಾಡಿ ತುಳು ಚಿತ್ರರಂಗದ ಅಳಿವು ಉಳಿವಿನ ಬಗ್ಗೆ ವಿವರಿಸಿದರು. ತುಳು ನಿರ್ಮಾಪಕರು ಸಂಘಟನೆಯೊಂದನ್ನು ರೂಪಿಸುವ ಅಗತ್ಯವಿದ್ದು, ಕಡಿಮೆ ವೆಚ್ಚದಲ್ಲಿ ತುಳು ಚಿತ್ರ ನಿರ್ಮಾಣ ಮಾಡಲು ಸಂಘಟನೆಯ ಮುಲಕ್ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಫಿಲ್ಮ್ ಚೇಂಬರ್‌ಗೆ ನೊಂದಾಯಿತವಾಗುವಂತೆ ತುಳು ಚಿತ್ರರಂಗದ ಸಂಘಟನೆಯೊಂದನ್ನು ರಚಿಸಬೇಕು. ಆ ಮೂಲಕ ಹಲವಾರು ಸವಲತ್ತುಗಳನ್ನು ನಾವು ಪಡೆಯಲು ಸಾಧ್ಯ. ಚಿತ್ರ ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಿದೆ. ಆಗ ತುಳು ಚಿತ್ರರಂಗದ ಬೆಳವಣಿಗೆ ಸಾಧ್ಯ ಎಂದು ನುಡಿದರು.

ಒರಿಯರ್ದೊರಿ ಅಸಲ್‌ ಚಿತ್ರ 150 ದಿನಗಳ ಪ್ರದರ್ಶನ ಕಾಣುವುದು ಖಚಿತ. ಮಂಗಳೂರು , ಉಡುಪಿ, ಬಂಟ್ವಾಳ , ಪುತ್ತೂರು , ಮೂಡಬಿದರೆಗಳಲ್ಲೂ ಚಿತ್ರ ಯಶಸ್ವಿಯಾಗಿ ಓಡುತ್ತಿದೆ. ತೀರ್ಥಹಳ್ಳಿ , ಕೊಪ್ಪ , ಸಕಲೇಶಪುರದಲ್ಲೂ ತೆರೆಕಂಡಿದೆ. ಬೆಂಗಳೂರಿನಲ್ಲಿ ಕೆಲಕಾಲ ಓಡಿದರೂ ಚಿತ್ರ ಮಂದಿರದ ಕೊರತೆಯಿಂದ ಪ್ರದರ್ಶನ ನಿಲ್ಲಿಸಲಾಗಿದೆ. ಈಗ ಮತ್ತೆ ಪ್ರದರ್ಶನ ಮಾಡುತ್ತೇವೆ. ಕೊಲ್ಲಿ ರಾಷ್ಟ್ರಗಳಲ್ಲಿ ಅಕ್ಟೋಬರ್‌ನಲ್ಲಿ ಪ್ರದರ್ಶನ ಮಾಡಲಾಗುವುದು. ಸೆನ್ಸಾರ್‌ ಮಂಡಳಿಯ ಕೆಲವೊಂದು ನಿಯಮಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿನ ಪ್ರದರ್ಶನ ವಿಳಂಬವಾಗಿದೆ ಎಂದು ಅವರು ತಿಳಿಸಿದರು.

ಈ ಚಿತ್ರವಂತೂ ತುಳು ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ. ಹೊಸ ಚಿತ್ರಗಳಿಗೆ 10 ಟೈಟಲ್‌ಗ‌ಳು ಈಗಾಗಲೇ ಛೇಂಬರ್‌ದಲ್ಲಿ ನೊಂದಾವಣೆಯಾಗಿದೆ. ಉತ್ತಮವಾಗಿ ಚಿತ್ರ ಮಾಡಿದರೆ ಜನರು ಪ್ರೋತ್ಸಾಹಿಸುತ್ತಾರೆ ಎನ್ನುವುದಕ್ಕೆ ಅಸಲ್‌ ಉದಾಹರಣೆ ಎಂದು ಅವರು ನುಡಿದರು.

ಈ ಚಿತ್ರದಿಂದ ಪಡೆದಿರುವ ಅನುಭವದಿಂದ 70 ಲಕ್ಷ ರೂ.ವೆಚ್ಚದಲ್ಲಿ ಉತ್ತಮ ಚಿತ್ರ ನಿರ್ಮಿಸಬಹುದು ಎನ್ನುವ ಧೈರ್ಯ ನನ್ನಲ್ಲಿದೆ. ತುಳು ಚಿತ್ರರಂಗಕ್ಕೆ ಉತ್ತಮ ಪ್ರೇಕ್ಷಕವರ್ಗವನ್ನು ರೂಪಿಸಬೇಕೆಂಬ ನನ್ನ ಆಸೆ ಈ ಚಿತ್ರದ ಮೂಲಕ ಸಾಧ್ಯವಾಗಿದೆ. ಇದುವರೆಗೆ ತುಳು ಚಿತ್ರಗಳಿಗೆ ಟಿ.ವಿ ಮಾಧ್ಯಮದಿಂದ ಹೆಚ್ಚಿನ ಪ್ರೋತ್ಸಾಹ ಸಿಕ್ಕಿರಲಿಲ್ಲ. ಆದರೆ ಅಸಲ್‌ಗೆ ಈಗ ಉತ್ತಮ ಬೇಡಿಕೆ ಬಂದಿದೆ.

ಡಬ್ಬಿಂಗ್‌ಗೂ ಮುಂದೆ ಬಂದಿದ್ದರು. ಆದರೆ ಬೇರೆ ಭಾಷೆಗಳಿಗೆ ಈ ಚಿತ್ರವನ್ನು ಡಬ್ಬಿಂಗ್‌ ಮಾಡಿದರೆ ಯಶಸ್ಸು ಸಾಧ್ಯವಿಲ್ಲ. ಅಲ್ಲಿನ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗಳು ತೀರಾ ಭಿನ್ನ. ಡಬ್ಬಿಂಗ್‌ಗೆ ಅವಕಾಶ ನೀಡಿದರೆ ನನಗೆ ಹಣ ಬರುತ್ತದೆ ನಿಜ , ಆದರೆ ಚಿತ್ರ ಪಡೆದವರು ಸೋಲಬಾರದು ಎನ್ನುವ ಕಾರಣಕ್ಕೆ ಡಬ್ಬಿಂಗ್‌ ರೈಟ್ಸ್‌ ನೀಡಲಿಲ್ಲ ಎಂದು ವಿಜಯಕುಮಾರ್‌ ವಿವರಿಸಿದರು.

ಚಿತ್ರದ ನಿರ್ದೇಶಕ ಹ. ಸೂ. ರಾಜಶೇಖರ್‌, ಸಂಗೀತ ನಿರ್ದೇಶಕ ಎ. ಕೆ. ವಿಜಯ, ಕಲಾವಿದರಾದ ನವೀನ್‌ಡಿ. ಪಡೀಲ್‌, ಸಂತೋಷ್‌ ಶೆಟ್ಟಿ ಹಾಜರಿದ್ದರು. ಸಂಘದ ಅಧ್ಯಕ್ಷ ಪಿ.ಬಿ.ಹರೀಶ್‌ ರೈ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ನಾಯಕ್‌ ಇಂದಾಜೆ ವಂದಿಸಿದರು.

1 ಪ್ರತಿಕ್ರಿಯೆ - ಶೀರ್ಷಿಕೆ - ತುಳು ಚಿತ್ರ ನಿರ್ಮಾಪಕ ವಿಜಯುಕಮಾರ್‌ ಕೊಡಿಯಾಲ್‌ಬೈಲ್‌ ಜೊತೆ ಪತ್ರಿಕಾ ಸಂವಾದ

  1. tiisiairni, xcqjshdscguw.com/

    NZ67np pzoxcrdpplll, [url=http://eszalvfyocxx.com/]eszalvfyocxx[/url], [link=http://hcjpdsisqudy.com/]hcjpdsisqudy[/link], http://qatfbbupcppz.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English