ಮಂಗಳೂರು: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಕುದುರೆಮುಖ ಮಜ್ದೂರ್ ಸಂಘದ ನಿಯೋಗವು ಸಂಸದ ನಳಿನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ಕಾವೂರಿನ ಕುದುರೆಮುಖ ಅತಿಥಿ ಗೃಹದಲ್ಲಿ ಭೇಟಿಯಾಯಿತು.
ಸಂಸ್ಥೆಯ ಅಭಿವೃದ್ಧಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿ ಮಾಡುವ ಬಗ್ಗೆ, ಕೌಶಲಯುತ ಕಾರ್ಮಿಕರ ನೇಮಕಾತಿ, ಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಮೊದಲಾದ ಬೇಡಿಕೆಗಳ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರಧಾನ ಮಂತ್ರಿಗಳ ಸ್ಕಿಲ್ ಇಂಡಿಯಾ ಯೋಜನೆಯಲ್ಲಿ ಈಗಾಗಲೇ ಸಂಸ್ಥೆಯು ತೊಡಗಿಸಿಕೊಂಡಿದ್ದು ಇದನ್ನು ಇನ್ನೂ ಉತ್ತಮ ರೀತಿಯಲ್ಲಿ ಬಳಸಿಕೊಂಡು ಉದ್ಯೋಗ ಸೃಷ್ಟಿ ಮಾಡುವಂತೆ ಒತ್ತಾಯಿಸಲಾಯಿತು.
ನಿಯೋಗದಲ್ಲಿ ಮಜ್ದೂರು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕರ್ಕೇರಾ, ಕೇಂದ್ರ ಸಮಿತಿಯ ಉಪಾಧ್ಯಕ್ಷ ಚಂದ್ರೇಗೌಡ ಕೆ.ಆರ್., ಉಪ ಪ್ರಧಾನ ಕಾರ್ಯದರ್ಶಿ ಲಾರೆನ್ಸ್ ಡಿ’ಸೋಜಾ ಶಾಖಾಧ್ಯಕ್ಷ ಭಗವಾನ್ದಾಸ್ ಬಿ.ಎನ್., ಬಿ.ಎಫ್.ಯು.ನ ಶಾಖಾಧ್ಯಕ್ಷ ವಿಶ್ವನಾಥ್, ದಿನೇಶ್ ಎಸ್., ಪದ್ಮನಾಭ ಮೊದಲಾದವರು ಉಪಸ್ಥಿರಿದ್ದರು.
Click this button or press Ctrl+G to toggle between Kannada and English