ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಿನ್ನೆ ನಡೆದ ಕಂಬಳದಲ್ಲಿ ಕೋಣಗಳಿಂದ ತುಳಿಯಲ್ಪಟ್ಟ ಬಾಲಕ ಕೂದಳೆಲೆಯ ಅಂತರದಲ್ಲಿ ಪಾರಾದ ಘಟನೆ ನಡೆಯಿತು.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪರೈ ನೇತೃತ್ವದಲ್ಲಿ 25 ನೇ ವರ್ಷದ ಅದ್ಧೂರಿ ಕಂಬಳ ನಡೆದಿತ್ತು. ಕಂಬಳ ಗದ್ದೆಯಿಂದ ಫಿನಿಶಿಂಗ್ ಪಾಯಿಂಟ್ಗೆ ಕೋಣಗಳು ಓಡಿಕೊಂಡು ಬಂದಾಗ ಕಂಬಳ ನೋಡುತ್ತಿದ್ದ ಬಾಲಕನೋರ್ವ ಕೋಣದ ಕಾಲಿನಡಿಗೆ ಬಿದ್ದಿದ್ದ.
ಆದರೆ ಯಾವುದೇ ಗಾಯವಾಗದೇ ಪವಾಡ ಸದೃಶವಾಗಿ ಬಾಲಕ ಪಾರಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Click this button or press Ctrl+G to toggle between Kannada and English