ಕರ್ನಾಟಕದಲ್ಲಿ ಬಿಜೆಪಿಗೆ 156 ಸ್ಥಾನಗಳ ಸ್ಪಷ್ಟ ಬಹುಮತ: ಜಾವಡೇಕರ್‌

11:57 AM, Wednesday, January 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

nalin-kumarಮಂಗಳೂರು: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 156 ಸ್ಥಾನಗಳ ಸ್ಪಷ್ಟ ಬಹುಮತ ಪಡೆದು ಆಡಳಿತ ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನೂರು ದಿನಗಳಲ್ಲಿ ದೇಶದಲ್ಲೇ ಕಾಂಗ್ರೆಸ್ ಹೋಗಿ ಬಿಜೆಪಿ ಬರಲಿದೆ. ದೇಶದಲ್ಲಿ ನಡೆಯುವ ಚುನಾವಣೆ ಎರಡು ರಾಜಕೀಯ ಪಕ್ಷಗಳ ಮಧ್ಯೆ ಅಲ್ಲ. ಎರಡು ರಾಜಕೀಯ ಸಂಸ್ಕೃತಿಯ ಮಧ್ಯೆ ನಡೆಯುತ್ತಿರುವ ಸ್ಪರ್ಧೆ ಎಂದು ಹೇಳಿದರು.

ಕಾಂಗ್ರೆಸ್ ಜಾತಿ ಗೂಂಡಾಗಿರಿ ಹಾಗೂ ಹಣ ಬಲದಿಂದ ಸ್ಪರ್ಧಿಸಿದರೆ, ಬಿಜೆಪಿ ಗುರಿ, ಪರಿಶ್ರಮ ಹಾಗೂ ಪ್ರತಿಭೆಯಿಂದ ಚುನಾವಣೆಗೆ ಸಿದ್ಧವಾಗಿದೆ. ಚಹಾ ಮಾರುವವ ಕೂಡಾ ಪ್ರಧಾನಿಯಾಗುವುದಿದ್ದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಬಿಜೆಪಿಯಿದ್ದರೆ ಒಬ್ಬ ದಲಿತ ನಾಯಕ ದೇಶದ ಅತ್ಯುನ್ನತ ಸ್ಥಾನಮಾನದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಬಹುದು ಎಂದರು.

ಕೇವಲ ಚುನಾವಣೆಗಾಗಿ ಸಿದ್ದರಾಮಯ್ಯ ಒಡೆದು ಆಳುವ ನೀತಿ ಅಳವಡಿಸುತ್ತಿದ್ದಾರೆ. ಭಯೋತ್ಪಾದನಾ ಸಂಘಟನೆಗಳ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರ, ಕೊಲೆ, ಕೋಮು ಸಂಘರ್ಷಗಳು ಸಾಮಾನ್ಯವಾಗುತ್ತಿವೆ. ಒಬ್ಬ ಕ್ರಿಮಿನಲ್ ಎನ್‌‌ಕೌಂಟರ್‌‌‌ನಲ್ಲಿ ಸತ್ತರೆ ಅವನಿಗೆ ಸರ್ಕಾರ ಪರಿಹಾರ ನೀಡಿ ಗೌರವ ಸೂಚಿಸುತ್ತದೆ. ಇದೆಂಥಹ ರಾಜತಂತ್ರ ಎಂದು ಪ್ರಶ್ನಿಸಿದ ಅವರು, ಕಾನೂನು ಸಂರಕ್ಷಣೆ ನಾಶವಾಗುತ್ತಿದೆ.

ಕಾನೂನು ರಕ್ಷಣೆ ಮಾಡುವ ಡಿಸಿ, ಎಸ್‌‌ಪಿ, ಪೊಲೀಸ್ ಕಮಿಷನರ್‌‌ಗಳ ಪದೇ ಪದೇ ವರ್ಗಾವಣೆಯಾಗುತ್ತಿದೆ. ಬಿಜೆಪಿಗೆ ಪ್ರಜಾಪ್ರಭುತ್ವ ಬೇಕು. ಕಾಂಗ್ರೆಸ್‌ಗೆ ಹಿಂಸೆ ಬೇಕು. ಆದರೆ ಇದೆಲ್ಲಾ ಕಡಿಮೆ ದಿನವಷ್ಟೇ. ಈಗಾಗಲೇ ದೇಶದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚುತ್ತಿದೆ. ನೂರು ದಿನಗಳಲ್ಲಿ ಭಾರತೀಯರು ಜಬರ್ದಸ್ತ್ ಬದಲಾವಣೆ ಕಾಣಲಿದ್ದಾರೆ ಎಂದರು.

ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಉಡುಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಶಾಸಕರಾದ ಎಸ್. ಅಂಗಾರ, ಕ್ಯಾ. ಗಣೇಶ್ ಕಾರ್ಣಿಕ್ ಈ ಸಂದರ್ಭದಲ್ಲಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English