ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಚಿಕ್ಕಂದಿನಲ್ಲೇ ಕಲಿಸಬೇಕು : ಒಡಿಯೂರು ಶ್ರೀ

9:04 PM, Sunday, September 18th, 2011
Share
1 Star2 Stars3 Stars4 Stars5 Stars
(4 rating, 1 votes)
Loading...

Odiyooru Sree

ವಿಟ್ಲ : ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಶ್ರೀ ಗುರುದೇವದತ್ತ ಸಂಸ್ಥಾನಮ್‌ ಒಡಿಯೂರು ಇದರ ಜಂಟೀ ಆಶ್ರಯದಲ್ಲಿ ಒಡಿಯೂರು ಜ್ಞಾನ ಮಂದಿರದಲ್ಲಿ ಮೂರು ದಿನಗಳ ಕವಿತಾ ರಚನಾ ಕಮ್ಮಟವನ್ನು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ರವಿವಾರ ದೀಪ ಬೆಳಗಿಸಿ ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಒಡಿಯೂರು ಶ್ರೀಗಳು ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಚಿಕ್ಕಂದಿನಲ್ಲೇ ಕಲಿಸಬೇಕು. ಮಕ್ಕಳಲ್ಲಿ ತುಳು ಭಾಷೆಯ ಪ್ರೀತಿಯನ್ನು ಬೆಳೆಸಬೇಕು. ಪ್ರತಿ ಮನೆಯಲ್ಲಿಯೂ ಸನಾತನ ತುಳು ಸಂಸ್ಕೃತಿಯನ್ನು ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.

ಸಭಾದ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ ಮಾತನಾಡಿ ಕವಿತೆ ಬರೆಯುವರಿಗೆ ಏಕಾಗ್ರತೆ ಬೇಕು. ಬರೆಯುವುದು ಸುಲಭ ಆಲ್ಲ ಅದಕ್ಕೆ ಜ್ಞಾನ ಭಂಡಾರವನ್ನು ಬೆಳೆಸಬೇಕು ಎಂದು ಅವರು ಹೇಳಿದರು.

ನಿವೃತ್ತ ಪ್ರಾಚಾರ್ಯ ಪ್ರೋ.ಪಿ.ಎನ್‌.ಮೂಡಿತ್ತಾಯ, ಸಾಹಿತಿ ಶ್ರೀನಿವಾಸ ಆಳ್ವ ಕಳತ್ತೂರು, ಪತ್ರಕರ್ತ ಯಶವಂತ ವಿಟ್ಲ, ಅವರು ಮುಖ್ಯ ಆತಿಥಿಯಾಗಿ ಭಾಗವಹಿಸಿದ್ದರು.

ಕಮ್ಮಟದಲ್ಲಿ ಡಾ.ವಸಂತ ಕುಮಾರ್‌ ಪೆರ್ಲ, ಎನ್‌.ಪಿ.ಶೆಟ್ಟಿ, ಡಾ.ರಾಧಾಕೃಷ್ಣ ಬೆಳ್ಳೂರು, ಮುದ್ದು ಮೂಡುಬೆಳ್ಳೆ, ಅತ್ರಾಡಿ ಅಮೃತಾ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.

ಹಿರಿಯ ಪತ್ರಕರ್ತ ಮಲಾರ್‌ ಜಯರಾಮ್‌ ರೈ ಅವರು ಸ್ವಾಗತಿಸಿದರು. ಟಿ.ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಶಾರದಾ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English