ಶಾ ಧಮ್ಕಿಗೆ ಹೆದರೋಕೆ ನಾವು ಕೈಗೆ ಬಳೆ ತೊಟ್ಟಿಲ್ಲ: ತನ್ವೀರ್‌ ಸೇಠ್ ಗುಡುಗು

1:20 PM, Friday, January 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

amit-shahರಾಯಚೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಧಮ್ಕಿ ಹಾಕೋಕೆ ಬರುತ್ತಾರೆ. ಅವರ ಧಮ್ಕಿಗೆ ಯಾರು ಹೆದರುವವರಿಲ್ಲ. ಇಲ್ಲಿ ಯಾರು ಕೈಗೆ ಬಳೆ ಹಾಕಿಕೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ಸೇಠ್ ಗುಡುಗಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 5 ವರ್ಷಗಳ ಭ್ರಷ್ಟಾಚಾರ ರಹಿತ ಆಡಳಿತವನ್ನು ಕಾಂಗ್ರೆಸ್ ನೀಡಿದೆ. ಬಿಜೆಪಿಯವರು ಕಾಂಗ್ರೆಸ್‌ ಸರ್ಕಾರದ ಮೇಲೆ ವಿನಾಕಾರಣ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಯಚೂರು ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರವಾಗಿ ನನಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮಾಧ್ಯಮದಿಂದಾಗಿ ವಿಚಾರ ತಿಳಿದುಕೊಂಡಿದ್ದಾನೆ. ಪರೀಕ್ಷೆ ಹತ್ತಿರ ಇರುವ ಹಿನ್ನಲೆಯಲ್ಲಿ ನನಗೆ ಕಾರ್ಯ ಒತ್ತಡ ಜಾಸ್ತಿ ಇರೋ ಕಾರಣ ಬದಲಾವಣೆ ಮಾಡಿರಬಹುದು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English