ಮಂಗಳೂರು: ಸಹ್ಯಾದ್ರಿ ಸಂಚಯದಿಂದ ‘ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನವು ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ವಿಶಿಷ್ಟ ರೀತಿಯಲ್ಲಿ ನಡೆಯಿತು.
ಕಾರ್ಯಕ್ರಮದ ರೂವಾರಿ ದಿನೇಶ್ ಹೊಳ್ಳ ಕಪ್ಪು ಬಟ್ಟೆ ಧರಿಸಿದರೆ ಇತರರು ಮುಖವಾಡ ಧರಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸರ ಪ್ರೇಮಿಗಳ ವಿರೋಧದ ಮಧ್ಯೆ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ಮುಂದಾದ ಕ್ರಮವನ್ನು ಖಂಡಿಸಿ ಮುರಿದು ಬಿದ್ದ ಮರದ ಕೊಂಬೆ, ಮೊಟ್ಟೆ ಒಡೆದು ಹೊರಗೆ ಬಂದ ಹಕ್ಕಿ ಮರಿಗಳ ಸಾವಿನ ದೃಶ್ಯವನ್ನು ಪ್ರದರ್ಶಿಸಿ ಅಣಕಿಸಲಾಯಿತು.
ಈ ಸಂದರ್ಭ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಂಘಟನೆಯ ಮುಖಂಡರಾದ ಹರೀಶ್ ಅಡ್ಯಾರ್, ದಿನೇಶ್ ಕೋಡಿಯಾಲ್ ಬೈಲ್, ಶಶಿಧರ ಶೆಟ್ಟಿ, ಯತೀಶ್ ಸಾಲ್ಯಾನ್, ಡಾ. ಅಣ್ಣಯ್ಯ ಕುಲಾಲ್ ಮತ್ತಿತರರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English