ಮಂಗಳೂರು: ಯಕ್ಷಗಾನ ರಂಗಭೂಮಿಯಲ್ಲಿ 67 ವರ್ಷಗಳ ಕಾಲ ಸಕ್ರಿಯರಾಗಿದ್ದು, ಎಲ್ಲ ಪಾತ್ರಗಳಲ್ಲಿ ಸೈ ಎನಿಸಿಕೊಂಡು ಪರಿಪೂರ್ಣ ಹಾಗೂ ಶ್ರೇಷ್ಠ ಕಲಾವಿದರಾಗಿ ಮೆರೆದವರು ಹಿರಿಯರು ಸಾಧಕರು, ನಮ್ಮವರೇಆದ ಸೂರಿಕಮೇರು ಕೆ.ಗೋವಿಂದ ಭಟ್ಟರು.ಇಂದು ಅವರಿಗೆ ದೊರೆತ ಗೌರವ ಯಕ್ಷಗಾನದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಜಗತ್ತಿನ ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನವು ಉತ್ತರ ಭಾರತೀಯರಿಗೆ, ವಿದೇಶಿಯರಿಗೆ ಪರಿಚಯಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಕೇಂದ್ರ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಗಲಿ. ಈ ಕಾರ್ಯಕ್ಕಾಗಿ ಸರಕಾರವು ಪ್ರಯತ್ನಿಸಬೇಕು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ದೆಹಲಿ ಘಟಕದ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರುಎಂದು ಹೇಳಿದರು.
ದೆಹಲಿ ಕರ್ನಾಟಕದ ಸಂಘದ ವಿಚಾರ ಸಂಕಿರಣ ಸಭಾ ಭವನದಲ್ಲಿಇತ್ತೀಚೆಗೆ ನಡೆದಯಕ್ಷಧ್ರುವ ಪಟ್ಲ ಫೌಂಡೇಶನ್‌ಟ್ರಸ್ಟ್ (ರಿ) ದೆಹಲಿ ಘಟಕ ಹಾಗೂ ಬಂಟ್ಸ್‌ಕಲ್ಚರಲ್ ಅಸೋಸಿಯೇಶನ್, ದೆಹಲಿ ತುಳುಸಿರಿ, ಗೋಕರ್ಣ ಮಂಡಳ,ದೆಹಲಿ ಬಿಲ್ಲವ ಅಸೋಸಿಯೇಶನ್ ಇವುಗಳ ಸಹಯೋಗದೊಂದಿಗೆಕೇಂದ್ರ ಸಂಗೀತ ನಾಟಕಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸೂರಿಕುಮೇರಿ ಕೆ. ಗೋವಿಂದ ಭಟ್‌ಅವರಿಗೆ ನಡೆದಅಭಿನಂದನಾಕಾರ್ಯಕ್ರಮ ಹಾಗೂ ’ರಣವೀಳ್ಯ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ಸರಕಾರದ ಮಾಜಿಅಡಿಶನಲ್ ಸಾಲಿಸಿಟರ್ ಜನರಲ್ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ದೆಹಲಿ ಘಟಕದ ಟ್ರಸ್ಟಿಯಾದ ಕೆ.ಎನ್. ಭಟ್‌ಅವರು ಸೂರಿಕುಮೇರಿ ಕೆ.ಗೋವಿಂದ ಭಟ್‌ಅವರನ್ನು ಅಭಿನಂದಿಸಿ ಯಕ್ಷಗಾನರಂಗದಲ್ಲಿ ಸೂರಿಕುಮೇರಿ ಕೆ.ಗೋವಿಂದ ಭಟ್‌ಅವರ ಸಾಧನೆ ಮಹತ್ತರವಾದುದು.ಈ ಸಾಧನೆಯನ್ನು ಸಂಘ ಸಂಸ್ಥೆಗಳು ಮಾತ್ರವಲ್ಲದೆ ಸರಕಾರವು ಗುರುತಿಸಿ ಗೌರವಿಸಿರುವುದು ನಮ್ಮೆಲ್ಲರಿಗೂಅಭಿಮಾನದ ಸಂಗತಿಎಂದು ಹೇಳಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಸೂರಿಕುಮೇರಿಕೆ.ಗೋವಿಂದ ಭಟ್‌ಅವರುಓರ್ವಕಲಾವಿದನುಜನಮಾನಸದಲ್ಲಿ ನೆಲೆಸುವುದೇ ಅವನಿಗೆ ಸಲ್ಲುವ ನಿಜವಾದಗೌರವ. ಆದರೂಇಂದುಕಲಾವಿದನ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯೊಂದಿಗೆ ಗೌರವಿಸುವ ಕಾರ್ಯವನ್ನು ಸರಕಾರವು ಮಾಡುತ್ತಿರುವುದು ಬಹಳ ಸಂತೋಷದ ಸಂಗತಿ.ಇನ್ನಷ್ಟು ಕಲೆಗೆ, ಕಲಾವಿದನಿಗೆಇದೇರೀತಿಯ ಪ್ರೋತ್ಸಾಹದೊರೆಯಲಿಎಂದು ಹೇಳಿದರು.ಬಳಿಕ ನಡೆದ ’ರಣವೀಳ್ಯ’ ಯಕ್ಷಗಾನ ತಾಳಮದ್ದಳೆಯಲ್ಲಿ ಕೌರವನಾಗಿ ಕೆ.ಗೋವಿಂದ ಭಟ್, ಕೃಷ್ಣನಾಗಿ ಉಜಿರೆಅಶೋಕ್ ಭಟ್, ವಿಧುರನಾಗಿರಂಜಿತಾಎಲ್ಲೂರುಅವರು ಮುಮ್ಮೇಳದಲ್ಲಿ ಹಾಗೂ ಪುತ್ತಿಗೆರಘುರಾಮ ಹೊಳ್ಳ, ಪಿ.ಜಿ. ಜಗನ್ನಿವಾಸ, ಯೋಗಿಶ್‌ಆಚಾರ್ಯ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.
ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಅಧ್ಯಕ್ಷರಾದ ಶ್ರೀ ಸರವು ಕೃಷ್ಣ ಭಟ್, ಬಂಟ್ಸ್‌ಕಲ್ಚರಲ್ ಅಸೋಸಿಯೇಶನ್‌ನ ಇದರಖಜಾಂಚಿ ಶ್ರೀ ಕೆ.ಎಸ್.ಜಿ. ಶೆಟ್ಟಿ, ದೆಹಲಿ ತುಳುಸಿರಿಯ ಅಧ್ಯಕ್ಷರಾದ ಶ್ರೀ ಕೆ.ಆರ್. ರಾಮಮೂರ್ತಿ, ಗೋಕರ್ಣ ಮಂಡಳದ ಮಾಜಿಅಧ್ಯಕ್ಷರಾದ ಶ್ರೀ ನಾರಾಯಣ ಭಟ್ ಉಪಸ್ಥಿತರಿದ್ದರು. ದೆಹಲಿ ತುಳುಸಿರಿಯ ಕಾರ್ಯದರ್ಶಿ ಪ್ರದೀಪ್ ಕೆ. ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಯಕ್ಷಧ್ರುವ ಪಟ್ಲ ಫೌಂಡೇಶನ್(ರಿ) ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿ ಪೃಥ್ವಿಕಾರಿಂಜೆ ವಂದಿಸಿದರು.
Click this button or press Ctrl+G to toggle between Kannada and English