ಬಂಟ್ವಾಳ: ಸ್ವಚ್ಛತೆ ಎಂಬುದು ಪ್ರತಿಯೊ ಬ್ಬರಲ್ಲಿಯೂ ಸ್ವಂ ಪ್ರೇರಣೆಯಿಂದ ಮೂಡಿ ಬರಬೇಕು. ಆ ಮೂಲಕ ಸ್ವಚ್ಛ ಪರಿಸರ ಮತ್ತು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೊಡಂಕಾಪು ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಸುಪ್ರಿಯಾ ಎ.ಸಿ.ಹೇಳಿದ್ದಾರೆ.
ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಕಾಲೇಜಿನ ಬಳಿ ಗುರು ವಾರ ನಡೆದ ‘ಸ್ವಚ್ಛ ಭಾರತ-ನಿರ್ಮಲ ಬಂಟ್ವಾಳ ಅಭಿಯಾನ’ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಇಕ್ಬಾಲ್ ನಂದರಬೆಟ್ಟು, ಜಗದೀಶ್ ಕುಂದರ್, ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ಯಡಪಡಿತ್ತಾಯ, ಸ್ಥಾಪಕಾಧ್ಯಕ್ಷ ಡಾ. ಬಿ.ವಸಂತ ಬಾಳಿಗ, ರೋಟರಿ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ಜೆಸಿಐ ಸವಿತಾ ನಿರ್ಮಲ್, ಪಲ್ಲವಿ ಕಾರಂತ್ ಇದ್ದರು.
ಇದೇ ವೇಳೆ ಪತ್ರಕರ್ತ ಮೌನೇಶ್ ವಿಶ್ವಕರ್ಮ ನೇತೃತ್ವದ ‘ಸಂಸಾರ’ ಜೋಡುಮಾರ್ಗ ತಂಡದಿಂದ ಬೀದಿ ನಾಟಕ ಪ್ರದರ್ಶನಗೊಂಡಿತು.
ಮುಹಮ್ಮದ್ ನಂದರಬೆಟ್ಟು ಸ್ವಾಗತಿಸಿದರು. ವಿದ್ಯಾ ರ್ಥಿನಿಯರಾದ ಭಾಗ್ಯಶ್ರೀ, ವಿದ್ಯಾ ನಿರೂಪಿಸಿದರು.
Click this button or press Ctrl+G to toggle between Kannada and English