ಮಂಗಳೂರು : ಸುರತ್ಕಲ್ ಮಧ್ಯ ಎಂಬಲ್ಲಿ ಶನಿವಾರ ಯುವತಿಯೋರ್ವಳು ಟೈಲರಿಂಗ್ ಕೆಲಸಕ್ಕೆ ಮನೆಯಿಂದ ಹೊರಟಾಗ ಕಪ್ಪು ಬಣ್ಣದ ಬೈಕಿನಲ್ಲಿ ಬಂದ ಯುವಕರಿಬ್ಬರು ಆಕೆಯ ಬ್ಯಾಗ್ ಎಳೆದು ಚಿನ್ನದ ಸರ ಎಳೆದ ಪ್ರಕರಣ ನಡೆದಿದೆ.|
ಮದ್ಯ ಸಮೀಪದ ವಿಜಯನಗರ ಎಂಬಲ್ಲಿ ಉಷಾ (24) ಎಂಬವರು ಮನೆಯಿಂದ ಬೆಳಿಗ್ಗೆ 9.30ಕ್ಕೆ ಹೊರಟಾಗ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಆಕೆಯ ಹಿಂದೆ ಬೈಕಿನಲ್ಲಿ ಬರುತ್ತಿದ್ದರು. ಅದನ್ನು ಗಮನಿಸಿದ ಆಕೆ ಗಾಬರಿಗೊಂಡು ಓಡಲಾರಂಬಿಸಿದಾಗ ಬೈಕಿನಲ್ಲಿ ಹಿಂಬಾಲಿಸಿದ ಇಬ್ಬರು ಆಕೆಯ ಬ್ಯಾಗ್ ಎಳೆದು ಚಿನ್ನದ ಸರವನ್ನು ಕಿತ್ತರು. ಯುವತಿ ತಕ್ಷಣ ಬೊಬ್ಬೆ ಹಾಕಿದಾಗ ಸಮೀಪದಲ್ಲಿದ್ದವರು ಸ್ಥಳಕ್ಕೆ ಧಾವಿಸಿ ಯುವಕನ್ನು ಹಿಡಿದು ಬೆಂಡೆತ್ತಿದಾಗ ಯುವತಿಯ ಸರವನ್ನು ವಾಪಾಸು ನೀಡಿದ್ದಾರೆ.
ಆರೋಪಿಗಳು ಕಪ್ಪು ಬಣ್ಣದ ಬೈಕಿನಲ್ಲಿ ಬಂದಿದ್ದರು ಬೈಕಿನಲ್ಲಿ ಹಿಂಬದಿ ಮತ್ತು ಮುಂದೆ ಬೇರೆ ಬೇರೆ ನಂಬರ್ ಪ್ಲೇಟ್ ಗಳನ್ನು ಅಳವಡಿಸಲಾಗಿದ್ದು ಇವರು ಉಳ್ಳಾಲ ಪರಿಸರದವರು ಎಂದು ಸ್ಥಳೀಯರಲ್ಲಿ ಬಾಯಿಬಿಟ್ಟಿದ್ದಾರೆ.
ಯುವತಿ ನೀಡಿದ ದೂರಿನಲ್ಲಿ ವಾಹನ ಸಂಖ್ಯೆ ಕೆಎ.19ಎಸ್ 1056 ಎಂದು ಹೇಳಲಾಗಿದ್ದು ಸುರತ್ಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುರತ್ಕಲ್ ತಡಂಬೈಲಿನ ಕಲ್ಯಾಣಿ ಅಪಾರ್ಟ್ಮೆಂಟ್ ನಲ್ಲಿ ಶುಕ್ರವಾರ ಒಂಟಿ ಮಹಿಳೆಯ ಮನೆಗೆ ನುಗ್ಗಿ ಕಳ್ಳತನ ನಡೆದ ಪ್ರಕರಣವೂ ಸುರತ್ಕಲ್ ಠಾಣೆಯಲ್ಲಿ ದಾಖಲಾಗಿದೆ
Click this button or press Ctrl+G to toggle between Kannada and English