ಪಂಜಿಮೊಗರು ಜೋಡಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಡಿವೈಎಫ್‌ಐ ಆಗ್ರಹ

7:42 PM, Tuesday, September 20th, 2011
Share
1 Star2 Stars3 Stars4 Stars5 Stars
(No Ratings Yet)
Loading...

DYFI-protest

ಮಂಗಳೂರು : ಡಿವೈಎಫ್‌ಐ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಪಂಜಿಮೊಗರು ತಾಯಿ- ಮಗು ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸ ಬೇಕು ಎಂದು ಪ್ರತಿಭಟನಾ ಸಭೆ .

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್‌ ಕಾಟಿಪಳ್ಳ ಪಂಜಿಮೊಗರಿನ ಘಟನೆ ಸಂಭವಿಸಿ 3 ತಿಂಗಳಾಗುತ್ತಾ ಬಂದರೂ ಇದನ್ನು ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ತನಿಖೆಯ ನೆಪದಲ್ಲಿ ಅಮಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ರಝಿಯಾ ಮತ್ತು ಆಕೆಯ ಪುತ್ರಿ ಫಾತಿಮಾ ಜುವಾ ಅವರ ಹತ್ಯೆ ಪ್ರಕರಣದ ಮುಚ್ಚಿ ಹೋಗುವ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು.

6 ತಿಂಗಳ ಹಿಂದೆ ನಡೆದ ಮೂಡುಶೆಡ್ಡೆಯ ವೆಂಕಟೇಶ್‌ ಮತ್ತು ಅದಕ್ಕಿಂತ ಹಿಂದೆ ಸಂಭವಿಸಿದ ವಕೀಲ ಪ್ರಿತಂ ಕೊಲೆ ಪ್ರಕರಣಗಳನ್ನು ಬೇಧಿಸಲು ಇದುವರೆಗೂ ಸಾಧ್ಯಾವಾಗಿಲ್ಲ. ಸ್ಥಳೀಯ ಪೊಲೀಸರು ಪ್ರಕರಣವನ್ನು ಬೇಧಿಸಲು ಸಾಧ್ಯವಾಗದಿರುವುದು ಅನುಮಾನಕ್ಕೆ ಎಡೆಯಾಗಿದೆ. ಆದ್ದರಿಂದ ಪ್ರಕರ‌ಣವನ್ನು ಸಿಬಿಐಗೆ ಒಪ್ಪಿಸ ಬೇಕು ಆಗ್ರಹಿಸಿದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ದಯಾನಂದ ಶೆಟ್ಟಿ, ಕಾಂಗ್ರೆಸ್‌ ನಾಯಕ ಬಿ.ಎ. ಮೊದಿನ್‌ ಬಾವಾ, ಪಂಜಿಮೊಗರಿನ ಕ್ಲೇವರ್‌ ಡಿ’ಸೋಜಾ, ಎಸ್‌.ಎಫ್‌.ಐ. ನಾಯಕ ಚರಣ್‌ ಶೆಟ್ಟಿ, ಹಕೀಂ ಕೂಳೂರು, ಖಲೀಸ್‌ ಪಂಜಿಮೊಗರು ಅವರು ಉಪಸ್ಥಿತರಿದ್ದರು.

ಜನವಾದಿ ಮಹಿಳಾ ಸಂಘಟನೆ, ಕಾವೂರು ಮಿತ್ರ ವೃಂದ, ನ್ಯೂ ಫ್ರೆಂಡ್ಸ್‌ ಸೌಹಾರ್ದನಗರ, ರಂಗ ಸ್ವರೂಪ ಕುಂಜತ್ತ ಬೈಲ್‌, ಬದ್ರಿಯಾ ಯಂಗ್‌ ಫ್ರೆಂಡ್ಸ್‌ ಗಾಂಧಿನಗರ, ಮುರ ಫ್ರೆಂಡ್ಸ್‌ ಅಂಬಿಕಾನಗರ, ಶುಭ ಸ್ವ ಸಹಾಯ ಸಂಘ ,ಪ್ರೀತಿ ಸ್ವ ಸಹಾಯ ಸಂಘ ವಿದ್ಯಾನಗರ, ಪ್ರಗತಿಪರ ಸ್ವ ಸಹಾಯ ಒಕ್ಕೂಟ ಪಂಜಿಮೊಗರು, ನವಜ್ಯೋತಿ ಫ್ರೆಂಡ್ಸ್‌, ಕಟ್ಟಡ ಕಾರ್ಮಿಕರ ಸಂಘ ಪಂಜಿಮೊಗರು, ಮುಸ್ಲಿಂ ಯಂಗ್‌ ಮೆನ್ಸ್‌ ಎಸೋಸಿಯೇಶನ್‌ ಮಂಜಟ್ಟಿ, ಸೆಬಾಸ್ಟಿಯನ್‌ ವಾರ್ಡ್‌ ಕ್ರೈಸ್ತ ಒಕ್ಕೂಟ ಪಂಜಿಮೊಗರು, ಅನ್ನಾ ವಾರ್ಡ್‌ ಕೂಳೂರು, ಐಸಿವೈಎಂ ಕೂಳೂರು, ತುಡರ್‌ ಕಲಾ ತಂಡ ಉರುಂದಾಡಿ, ವಿವೇಕನಗರ ಫ್ರೆಂಡ್ಸ್‌, ಟೆಂಪೊ ಚಾಲಕ ಮಾಲಕರ ಸಂಘ ಮತ್ತಿತರ ಸಂಘಟನೆಗಳು ಪ್ರತಿಭಟನೆಯನ್ನು ಬೆಂಬಲಿಸಿದ್ದವು.

ಪ್ರತಿಭಟನಾ ಸಭೆಯ ಬಳಿಕ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English