ವಿಜಯಪುರದಲ್ಲಿ ಖೊಟಾ ನೋಟು ಮುದ್ರಣ, ಮೂವರ ಬಂಧನ

1:51 PM, Monday, January 29th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

cota-noteವಿಜಯಪುರ: ನಗರದಲ್ಲಿ ಖೋಟಾ ನೋಟು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರದ ದರ್ಗಾ ಜೈಲು ರಸ್ತೆಯ ಮನೆಯೊಂದರಲ್ಲಿ ಖೊಟಾ ನೋಟು ತಯಾರಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 67200 ಮೌಲ್ಯದ ಖೋಟಾ ನೋಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾರತಕ್ಕೆ ಖೋಟಾ ನೋಟು ಬರುವುದು ಎಲ್ಲಿಂದ? ಡಿಸಿಐಬಿ ಇನ್ಸ್‌ಪೆಕ್ಟರ್‌ ಚಂದ್ರಕಾಂತ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಆರೋಪಿಗಳು 200,500 ಮತ್ತು 2000 ಮುಖಬೆಲೆಯ ನೋಟುಗಳನ್ನು ಮಾರುತ್ತಿದ್ದರು ಎನ್ನಲಾಗಿದೆ. ಖೋಟಾ ನೋಟು ಮುದ್ರಣದಲ್ಲಿ ನಿರತರಾಗಿದ್ದ ಹಾಜಿಮಸ್ತಾನ ವಾಲೀಕಾರ್ (23), ಸಿರಾಜ್ ಮಳ್ಳಿ (27), ಮೆಹಬೂಬ್ ವಾಲೀಕಾರ್ (23) ಅವರುಗಳನ್ನು ಪೊಲೀಸರು ಬಂಧಿಸಿದ್ದು,ಅವರಿಂದ ಖೋಟಾ ನೋಟು ಮುದ್ರಿಸುವ 38 ಪೇಪರ್‌ಗಳು, ಎಪ್ಸಾನ್ ಕಂಪೆನಿಯ 2 ಪ್ರಿಂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English