ಬೀಡಿ ಉದ್ಯಮದ ಸ್ಥಿತಿಗತಿ ಕುರಿತು ಪ್ರಧಾನಿ ಗಮನ ಸೆಳೆಯುತ್ತೇನೆ: ನಳಿನ್‌‌

9:53 AM, Wednesday, January 31st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

nalin-kumarಮಂಗಳೂರು: ಜಿಲ್ಲೆಯ ಅಭಿವೃದ್ಧಿಗೆ ಬೀಡಿ ಕಾರ್ಮಿಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಬೀಡಿ, ಗೇರು, ಹೆಂಚು ಉದ್ಯಮ ನಶಿಸಬಾರದು. ಇದರ ಪುನಶ್ಚೇತನಕ್ಕೆ ಎಲ್ಲರ ಸಹಕಾರ ಅಗತ್ಯ. ಬೀಡಿ ಉದ್ಯಮದ ಸ್ಥಿತಿಗತಿ ಮತ್ತದರ ಆವಶ್ಯಕತೆಯ ಬಗ್ಗೆ ಪ್ರಧಾನಿ ಸಹಿತ ಸಂಬಂಧಿತ ಸಚಿವರ ಗಮನ ಸೆಳೆಯುವುದಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್‌ ಹೇಳಿದರು.

nalin-kumar-2ಸೌತ್ ಕೆನರಾ ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ವತಿಯಿಂದ ನಗರದ ಪುರಭವನದಲ್ಲಿ ನಡೆದ ಬೀಡಿ ಕಾರ್ಮಿಕರ ಮತ್ತು ಗುತ್ತಿಗೆದಾರರ ಜಂಟಿ ಸಮಾವೇಶವನ್ನು ಅವರು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕಾರ್ಮಿಕರು ಸಂಘಟಿತರಾಗಿ ಧ್ವನಿ ಎತ್ತಿದರೆ ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕೊಟ್ಪಾದಂತಹ ಕಾಯ್ದೆಯಿಂದ ಬೀಡಿ ಉದ್ಯಮ ನಾಶವಾಗಬಹುದು. ಇದರ ವಿರುದ್ಧ ಕಾರ್ಮಿಕರು ಹೋರಾಟ ಮಾಡಬೇಕಿದೆ ಎಂದರು.

ಹಿಂದೆ ಬೀಡಿ ಕಾರ್ಮಿಕರ ಪರವಾಗಿ ಎಡಪಕ್ಷಗಳು ಹೋರಾಟ ಮಾಡುತ್ತಿದ್ದವು. ಹೋರಾಟದ ಫಲವಾಗಿಯೇ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಬೀಡಿ ಕಾರ್ಮಿಕರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದರು. ಬೀಡಿ ಕಾರ್ಮಿಕರಿಗಾಗಿ ಪ್ರತ್ಯೇಕ ವ್ಯವಸ್ಥೆ ಜಾರಿಗೆ ಬಂದಿತ್ತು. ಆದರೆ, ಈಗ ಕೆಲವು ನೀತಿಗಳ ಮೂಲಕ ಬೀಡಿ ಉದ್ಯಮವು ನಾಶದ ಅಂಚಿನಲ್ಲಿವೆ.

nalin-kumar-3ಬೀಡಿ ಸೇವನೆಯು ಹಾನಿಕಾರಕ ಎಂಬ ಅಂಶದಿಂದಾಗಿ ಯುವ ಜನಾಂಗ ಬೀಡಿ ಸೇವನೆಯಿಂದ ದೂರ ಸರಿಯುವಂತಾಗಿದೆ. ಕೊಟ್ಪಾ ಬಂದ ಬಳಿಕ ಪೊಲೀಸರ ಕಿರುಕುಳ ಕೂಡ ಅತಿಯಾಗಿದೆ. ಬೀಡಿ ಉದ್ಯಮ ಉಳಿಯಬೇಕಿದೆ. ಕಾರ್ಮಿಕರ ಸ್ಥಿತಿಯೂ ಚೆನ್ನಾಗಿರಬೇಕಿದೆ. ಈ ನಿಟ್ಟಿನಲ್ಲಿ ಬೀಡಿ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English