ಗಾಂಧೀಜಿಗೆ ಅವಮಾನವಾದರೂ ಪ್ರತಿಭಟನೆಯಾಗುತ್ತಿಲ್ಲ: ದಿನೇಶ್‌ ಅಮಿನ್‌ಮಟ್ಟು

10:12 AM, Wednesday, January 31st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

gandhiji-1ಮಂಗಳೂರು: ಮಹಾತ್ಮ ಗಾಂಧೀಜಿಗೆ ಅವಮಾನ, ದೂಷಣೆ ಮಾಡಿದರೂ ಕೂಡಾ ಪ್ರತಿಭಟನೆಯಾಗುತ್ತಿಲ್ಲ. ಅದೇ ಬಸವಣ್ಣ, ಅಂಬೇಡ್ಕರ್‌‌ಗೆ ಅವಮಾನ ಮಾಡಿದರೆ ಪ್ರತಿಭಟನೆಯಾಗುತ್ತಿದೆ. ಇದು ಗಾಂಧೀಜಿಗೆ ಬಂದ ದುಸ್ಥಿತಿ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ನಡೆದ `ಸೌಹಾರ್ದತೆಗಾಗಿ ಕರ್ನಾಟಕ’ ವತಿಯಿಂದ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿಯವರನ್ನು ವಿವಿಧ ವರ್ಗದವರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿರುವುದರಿಂದ ಗಾಂಧೀಜಿಗೆ ಈ ಸ್ಥಿತಿ ಬಂದಿದೆ. ಗಾಂಧೀಜಿ ಒಂದು ವರ್ಗಕ್ಕೆ ಸೇರಿದವರಲ್ಲ. ಅದು ಅವರ ದೊಡ್ಡತನವೂ ಹೌದು, ದೌರ್ಭಾಗ್ಯವೂ ಹೌದು ಎಂದರು.

gandhijiಸೌಹಾರ್ದತೆಯನ್ನು ಬೇರ್ಪಡಿಸುವ ಪ್ರಯತ್ನ ಇವತ್ತು ನಿನ್ನೆಯದಲ್ಲ. ಇತಿಹಾಸದಲ್ಲೂ ಇಂತಹ ಅನೇಕ ಘಟನೆಗಳಿವೆ. ಮತ್ತೆ ಸೌಹಾರ್ದತೆ ನೆಲೆಸಲು ಕಾರ್ಯಕ್ರಮಗಳನ್ನೇ ಮಾಡಬೇಕಾಗಿದೆ. ಸೌಹಾರ್ದತೆಯ ಕೊಂಡಿಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತರು ಕಟ್ಟಿದ್ದಾರೆ. ಅಂತಹ ಕೊಂಡಿಯ ಮಧ್ಯೆ ಬಿರುಕು ಮೂಡಿಸುವ ಕೆಲಸಾಗುತ್ತಿರುವುದು ದುರಂತ ಎಂದು ಹೇಳಿದರು.

ಗಾಂಧೀಜಿಯವರನ್ನು ಹತ್ಯೆ ಮಾಡಿದ್ದು ಸರಿ ಎನ್ನುವ ವ್ಯಕ್ತಿಗಳು ಇಂದು ನಿರಾತಂಕವಾಗಿ ಓಡಾಡುತ್ತಿರುವುದು ಅಪಮಾನ ಎಂದ ಅವರು, ಕಾಂಗ್ರೆಸ್‌‌‌ನವರು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹೇಳಿಕೆ ನೀಡಲು ಹಿಂಜರಿಯುತ್ತಿದ್ದಾರೆ. ಅವರೇನು ದೇಶದ ಪ್ರಧಾನಿಯೇ ಅಥವಾ ಹಿಂದೂ ಪರಿಪಾಲಕನೆಂದು ಭಯಪಡುತ್ತಿರ್ದದೀರಾ ಎಂದು ಮಾತಿನಲ್ಲೇ ಕುಟುಕಿದರು. ನಾಗ್ಪುರ, ಕಲ್ಲಡ್ಕ, ಕೇಶವ ಕೃಪಾದಲ್ಲಿ ಕೋಮುಗಲಭೆ, ಹತ್ಯೆಯ ಹಿಂದೆ ಕಾಣದ ಕೈಗಳು ಇರಬಹುದು. ಆದರೆ ಕಾರ್ಯಕರ್ತರು ಸುಮ್ಮನೆ ಬಲಿಪಶುವಾಗುತ್ತಿದ್ದಾರೆ ಎಂದರು.

gandhiji-2ಜನಾರ್ದನ ಪೂಜಾರಿಯವರ ಆತ್ಮಕಥೆ ಬಿಡುಗಡೆ ಸಂದರ್ಭ ಕಲ್ಲಡ್ಕ ಪ್ರಭಾಕರ್ ಭಟ್ ಜೊತೆ ಕೈ ಜೋಡಿಸಿರುವುದು ಸೌಹಾರ್ದತೆ ಅಲ್ಲ. ನಾರಾಯಣ ಗುರುಗಳು ಕಟ್ಟಿದ ಕುದ್ರೋಳಿ ದೇವಸ್ಥಾನಕ್ಕೆ ಅವರು ಕಾಲಿಟ್ಟದ್ದು ನಾರಾಯಣ ಗುರುಗಳಿಗೆ ಮಾಡಿದ ಅಪಮಾನ. ದೇವರನ್ನು ಚುನಾವಣಾ ಪೋಸ್ಟರ್‌‌ನ್ನಾಗಿ ಮಾಡುವವರನ್ನು ದೊಣ್ಣೆಯಲ್ಲಿ ಬಾರಿಸಬೇಕು. ಇಂತವರು ಧರ್ಮದ್ರೋಹಿಗಳು. ಅಧಿಕಾರಕ್ಕೆ ಬಂದಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ ಕೇಂದ್ರ ಸರ್ಕಾರ ಈಗ ಪಕೋಡ ಮಾರಿ ಎಂದು ಯುಟರ್ನ್‌ ಹೊಡೆದಿದೆ ಎಂದು ಟೀಕಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English