ಮಂಗಳೂರು: ದೀಪಕ್ ರಾವ್ ಎನ್ನುವ ಮುಗ್ಧನ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆ ಮಾಡಬಾರದಾ’ ಎಂದು ಬಹಿರಂಗವಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಜಗದೀಶ ಶೇಣವ ವಿರುದ್ಧ ಮಂಗಳೂರು ಉತ್ತರ ಠಾಣಾ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿದ್ದಾರೆ.
ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಭಾನುವಾರ `ಹಡೆದವ್ವನ ಶಾಪ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಜಗದೀಶ ಶೇಣವ ಅವರ ಪ್ರಚೋದನಾಕಾರಿ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಇಂತಹ ಪ್ರಚೋದನಕಾರಿ ಭಾಷಣ ಮಾಡಿದ ಜಗದೀಶ್ ಶೇವಣ ವಿರುದ್ಧ ಇದೀಗ ಪೊಲೀಸ್ 153(ಎ) ಹಾಗೂ 116 ಸೆಕ್ಷನ್‌ನಡಿ ಪಿಎಸ್ಐ ಅನಂತ ಮುರುಡೇಶ್ವರ ಸ್ವಯಂ ಪ್ರಕರಣ ದಾಖಲಿಸಿದ್ದಾರೆ.
Click this button or press Ctrl+G to toggle between Kannada and English