ಕೇಂದ್ರ ಬಜೆಟ್ 2018: ನಿರೀಕ್ಷೆಗಳು, ಅಪೇಕ್ಷೆಗಳ ಮಧ್ಯೆ ಹಗ್ಗದ ನಡಿಗೆ

11:22 AM, Thursday, February 1st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

budjetನವ ದೆಹಲಿ: ಕೇಂದ್ರ ಸರ್ಕಾರಕ್ಕೆ ಈ ಬಾರಿಯ ಬಜೆಟ್ ಹಗ್ಗದ ಮೇಲಿನ ನಡಿಗೆ. ಈ ಬಜೆಟ್ ನಲ್ಲಿನ ಪ್ರಮುಖ ಘೋಷಣೆಗಳು ಯಾವುದು ಆಗಬಹುದು ಎಂಬುದರ ವಿವರಗಳು ಇಲ್ಲಿವೆ.  ಆದಾಯ ತೆರಿಗೆ ವಿನಾಯಿತಿ ಸದ್ಯಕ್ಕೆ ಎರಡೂವರೆ ಲಕ್ಷ ರುಪಾಯಿ ಇದೆ. ಅದನ್ನು ಹೆಚ್ಚಿಸಬಹುದು ಎಂಬುದು ಹೆಚ್ಚಿನ ಸಂಖ್ಯೆಯಲ್ಲಿರುವ ವೇತನದಾರರ ನಿರೀಕ್ಷೆ.  ಷೇರುಗಳಿಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ಹಾಕಬಹುದು ಕಾರ್ಪೋರೇಟ್ ತೆರಿಗೆಗಳಲ್ಲಿ ಇಳಿಕೆ ಮಾಡಬಹುದು.

ಬಜೆಟ್ ಬಗ್ಗೆ ಐಐಎಂಬಿ ಪ್ರೊಫೆಸರ್ ವೈದ್ಯನಾಥನ್ ಕೃಷಿ ವಲಯಕ್ಕೆ ಭರಪೂರ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಅದರಲ್ಲೂ ದೇಶದಾದ್ಯಂತ ಕೃಷಿ ಸಾಲ ಮನ್ನಾ, ಕೃಷಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಮೊತ್ತ ಮೀಸಲಿಡುವ ಸಾಧ್ಯತೆ ಇದೆ. ಬಂಡವಾಳ ಹಿಂತೆಗೆತದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಬಡತನ ನಿರ್ಮೂಲನೆಗಾಗಿ ಹಾಗೂ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಬಹುದು.ಸಬ್ಸಿಡಿಗಾಗಿ ಹೆಚ್ಚಿನ ಹಣ ಮೀಸಲಿಡಬಹುದು.ಷೇರಿನ ಮೇಲೆ ಡಿವಿಡೆಂಡ್ ಗೆ ತೆರಿಗೆ ಹಾಕಬಹುದು, ಐವತ್ತು ಲಕ್ಷಕ್ಕಿಂತ ಹೆಚ್ಚು ಆದಾಯಕ್ಕೆ ಹೆಚ್ಚಿನ ಸರ್ ಚಾರ್ಜ್ ವಿಧಿಸಬಹುದು.

ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಏರಿಕೆ ಮಾಡಬಹುದು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಬಹುದು ಎಂಬ ನಿರೀಕ್ಷೆ ಇದೆ.ವಿಧಾನಸಭೆ ಚುನಾವಣೆಗಳು ಎದುರಿಗೆ ಇರುವುದರಿಂದ ಬಂಡವಾಳ ಹೂಡಿಕೆಗಿಂತ ಖರ್ಚಿನ ಬಾಬ್ತು ಹೆಚ್ಚಾಗುವ ಸಾಧ್ಯತೆ ಇದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English