ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು,ದೆಹಲಿ ಕರ್ನಾಟಕ ಸಂಘದ ಸಹಯೋಗದಲ್ಲಿ ವಚನ ಸಂಗೀತೋತ್ಸವ ಕಾರ್ಯಕ್ರಮವನ್ನುಇದೇ ಜನವರಿ 28 ರಂದುದೆಹಲಿ ಕರ್ನಾಟಕ ಸಂಘದಲ್ಲಿ ಆಯೋಜಿಸಿತ್ತು. ಜೆ.ಎನ್.ಯು.ವಿನ ಪ್ರಾಧ್ಯಾಪಕರಾದ ಪ್ರೊ.ಎಚ್.ಎಸ್. ಶಿವಪ್ರಕಾಶ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಮಾಜಿಅಧ್ಯಕ್ಷರು, ಕೃಷಿ ಸಂಶೋಧನಾಕೇಂದ್ರ, ನವದೆಹಲಿ ನಿವೃತ್ತ ಕುಲಪತಿಗಳಾದ ಶ್ರೀ ಆರ್.ಆರ್.ಹಂಚನಾಳ ಸಭಾಅಧ್ಯಕ್ಷತೆಯನ್ನು ವಹಿಸಿದ್ದರು.
ರಾಷ್ಟ್ರೀಯಗ್ರಾಹಕರ ವ್ಯಾಜ್ಯ ಪರಿಹಾರಆಯೋಗದ ನ್ಯಾಯಾಧೀಶರಾದಡಾ. ಸಿದ್ದರಾಮೇಶ್ವರ ಕಂಟೀಕರಅವರು ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಜಂಟಿ ನಿರ್ದೇಶಕರಾದ ಶ್ರೀ ಬಲವಂತರಾವ್ ಪಾಟೀಲ ಮತ್ತುದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜಅವರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿಇಲಾಖೆಯಜಂಟಿ ನಿರ್ದೇಶಕರಾದ ಶ್ರೀ ಬಲವಂತರಾವ್ ಪಾಟೀಲ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡುತ್ತ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದಂತಹ ವಚನ ಚಳುವಳಿ ಬಗ್ಗೆ ವಿಸ್ತಾರವಾಗಿ ಹೇಳಿದರು.
ಇತ್ತೀಚೆಗೆ ವಚನಗಳ ಬಗ್ಗೆ ಹಾಗೂ ಶರಣರ ಬಗ್ಗೆ ಸಾಕಷ್ಟು ತಿಳುವಳಿಕೆ ಜನರಲ್ಲಿ ಬಂದರೂ ಕೂಡಾ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರು ಬಹಳ ವಿರಳ.ಇವತ್ತೂ ಕೂಡಾ ಅಂತಹ ಒಳ್ಳೆಯ ವಿಚಾರಗಳನ್ನು, ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಹೆಚ್ಚು ಹೆಚ್ಚು ಜನರಿಗೆಅದನ್ನು ತಿಳಿಯ ಪಡಿಸತಕ್ಕಂತಹ ಕೆಲಸ ಮಾಡಬೇಕಾಗಿದೆ. ಜನರಲ್ಲಿ ಜಾಗೃತಿಯನ್ನು, ಒಳ್ಳೆಯ ವಿಚಾರಗಳನ್ನು, ಶರಣರ ವಚನಗಳನ್ನು ಪ್ರಸಾರ ಮಾಡತಕ್ಕಂಹದ್ದುಇವತ್ತು ಬಹಳ ಅಗತ್ಯಇದೆ. ಅನೇಕ ವಿದ್ವಾಂಸರು ಆ ವಚನಗಳನ್ನು ಪರಿಷ್ಕರಣೆ ಮಾಡಿಅದನ್ನು ಪ್ರಕಟ ಮಾಡಿ ಬೇರೆ ಬೇರೆ ದೃಷ್ಟಿಕೋನಗಳಲ್ಲಿ ಅವುಗಳನ್ನು ವಿಶ್ಲೇಷಣೆ ಮಾಡಿ, ಜನರಿಗೆ ಅವುಗಳನ್ನು ತಿಳಿಸತಕ್ಕಂತಹ ಕೆಲಸವನ್ನು ಮಾಡುತ್ತಾಇದ್ದಾರೆಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಕರಾದ ಡಾ.ಎಚ್.ಎಸ್. ಶಿವಪ್ರಕಾಶ್ ಅವರು ಮಾತನಾಡುತ್ತ ಅನುಭವ ಮಂಟಪ 12ನೇ ಶತಮಾನದಲ್ಲಿತ್ತು ಅದನ್ನು ನಾನು ನಂಬಿದ್ದೀನಿ.ಅದುಇತಿಹಾಸ ಅನ್ನುವುದಕ್ಕಿಂತ ಅದೊಂದು ಆಶಯ. ಅದು ಕೇವಲ 11ನೇ ಶತಮಾನದಲ್ಲಿರಲಿಲ್ಲ, ಎಲ್ಲಿಎಲ್ಲಿ ವಚನದ ಬಗ್ಗೆ ಮತ್ತೆ ಮತ್ತೆಚಿಂತನೆ ನಡೆಯುತ್ತಾ ಇದೆ ಅಲ್ಲೆಲ್ಲಾ ಹೊಸ ಹೊಸ ಅನುಭವ ಮಂಟಪ ಸೃಷ್ಟಿಯಾಗುತ್ತಾ ಇದೆ.ಇವತ್ತು ದೆಹಲಿ ಕರ್ನಾಟಕ ಸಂಘದಲ್ಲಿ ಒಂದು ಹೊಸ ಅನುಭವ ಮಂಟಪವನ್ನು ಸೃಷ್ಟಿ ಮಾಡಿದ್ದೇವೆ.
ವಚನ ಯಾವುದೇ ಒಂದು ಜಾತಿಯ, ಒಂದುಕುಲದ, ಒಂದುಜನಾಂಗದ ಸ್ವತ್ತಲ್ಲ. ವಚನ ಓದು ಸಾಹಿತ್ಯವಲ್ಲ, ಅದನ್ನುಓದು ಸಾಹಿತ್ಯವನ್ನಾಗಿ ಮಾಡಿದ್ದು, 15ನೇ ಶತಮಾನದಲ್ಲಿ ಚೌಡದೇವಯ್ಯನಆಶ್ರಮದಿಂದ 101 ವಿರಕ್ತರು. ಅವರೇ ವಚನಗಳನ್ನೆಲ್ಲ ಸಂಪಾದನೆ ಮಾಡಿದ್ದು, ಅದಕ್ಕೆ ವ್ಯಾಖ್ಯಾನಗಳನ್ನು ಬರೆದದ್ದು, ಅದಕ್ಕೆ ಕಥೆಗಳನ್ನು ಪೋಣಿಸಿದ್ದು, ಪುರಾಣ ಪವಾಡಗಳನ್ನು ಸೇರಿಸಿದ್ದು ಎಲ್ಲಾ 101 ವಿರಕ್ತರು ಮಾಡಿದ ಕೆಲಸ. ಅವರು ಮಾಡಿದ ಕೆಲಸದ ಪರಿಣಾಮವಾಗಿ ನಮಗೆ ಇವತ್ತು ವಚನಗಳು ಲಭ್ಯ ಆಗ್ತಾ ಇರುವುದುಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಡಾ.ಸಿದ್ದರಾಮೇಶ್ವರ ಕಂಟೀಕರ ಅವರು ಮಾತನಾಡುತ್ತ ವಚನಗಳ ಕುರಿತುಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದನ್ನು ಶ್ಲಾಘಿಸಿದರು.
ಸಭಾ ಕಾರ್ಯಕ್ರಮವನ್ನು ದೆಹಲಿ ಕರ್ನಾಟಕ ಸಂಘದ ಸಕ್ರಿಯ ಸದಸ್ಯ ರಾದಚಂದ್ರಶೇಖರ ಎನ್.ಪಿ.ಅವರು ನಿರೂಪಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜ ಅವರು ವಂದಿಸಿದರು.ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರೀ ಅಂಬಯ್ಯ ನುಲಿ, ರಾಯಚೂರು, ಶ್ರೀಮತಿ ಚೇತನಾ, ಮುಧೋಳ್, ಕು.ಮಲಾಶ್ರೀ ಕಣವಿ, ಕಲಬುರಗಿ, ಶ್ರೀಮತಿ ಶ್ವೇತಾ ಪ್ರಭು, ಬೆಂಗಳೂರು, ಶ್ರೀ ಅನುರಾಗ ಗದ್ದಿ, ಗಂಗಾವತಿ, ಡಾ.ಕೆ.ರಾಮೇಶ್ವರಪ್ಪ ಮತ್ತುತಂಡದಿಂದ ವಚನ ಗಾಯನ ಮತ್ತುರಂಗಭಾರತಿತಂಡದಿಂದ ’ಶಿವರಾತ್ರಿ’ ನಾಟಕ ಮತ್ತು ನಿರಂತರ ಫೌಂಡೇಷನ್, ಮೈಸೂರುಕಲಾವಿದರಿಂದ ’ಕೂಡಲ ಸಂಗಮ’ ನೃತ್ಯರೂಪಕ ಪ್ರದರ್ಶನಗೊಂಡಿತು.
Click this button or press Ctrl+G to toggle between Kannada and English