ಅಚ್ಚೇ ದಿನ್‌ ಅಮಿತ್‌ ಶಾ ಮಗ, ಅಂಬಾನಿ, ಅದಾನಿಗೆ ಬಂದಿರಬಹುದು: ಐವನ್‌

10:09 AM, Saturday, February 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ivan-dsouzaಮಂಗಳೂರು: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಮಾಡುತ್ತೇವೆ ಎಂದು ಹೇಳಿ ಈಗ ಆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವನ್ನೆ ಮಾಡದೆ ಮೀನುಗಾರರಿಗೆ ಅನ್ಯಾಯ ಮಾಡಲಾಗಿದೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬೆಲೆ ಏರಿಕೆ ನಿಯಂತ್ರಣ, ತೈಲೋತ್ಪನ್ನ ಬೆಲೆ ಇಳಿಕೆ, ರಾಜ್ಯ ಸರ್ಕಾರದ ಸೆಸ್ ಕಡಿಮೆ ಮಾಡುವ ದಿಟ್ಟತನ ತೋರಿಲ್ಲ. ಈ ಬಜೆಟ್‌ನಲ್ಲಿ ಅಚ್ಚೇ ದಿನ್ ನಿರೀಕ್ಷೆ ಸುಳ್ಳಾಗಿದೆ. ಅಚ್ಚೇ ದಿನ್ ಅಮಿತ್ ಶಾ ಮಗನಿಗೆ, ಅಂಬಾನಿ, ಅದಾನಿಗೆ ಬಂದಿರಬಹುದು ಎಂದರು.

ಕೇಂದ್ರ ಸರ್ಕಾರ ರೈತ ಪರ ಬಜೆಟ್‌ ಮಂಡಿಸಿಲ್ಲ. ರಾಜ್ಯ ಸರ್ಕಾರ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸದಿರುವುದು ಖೇದಕರ ಎಂದರು.

ಆಯುಷ್‌ನಲ್ಲಿ 50 ಕೋಟಿ ಜನಕ್ಕೆ ಕೇವಲ 2ಸಾವಿರ ಕೋಟಿ ಮಿಸಲಿಟ್ಟಿದ್ದು, ಇದು ಖಂಡಿತಾ ಸಾಧ್ಯವಿಲ್ಲ. ಆದುದರಿಂದ ಇದು ಅಚ್ಚೇ ದಿನ್‌‌ ಗೋಲ್‌ಮಾಲ್. ಈ ಹಿಂದೆ ಕಪ್ಪುಹಣದಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15ಲಕ್ಷ ಹಾಕುತ್ತೇವೆ ಎಂದು ಹೇಳಿ ಗೋಲ್‌ಮಾಲ್ ಮಾಡಿತ್ತು ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಇಲ್ಲಿನ ರೈಲ್ವೆ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ನೀರಾವರಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇದಲ್ಲದೆ ಅಸಂಘಟಿತ ಕಾರ್ಮಿಕರ ಬಗ್ಗೆ, ಉದ್ಯೋಗ ಸೃಷ್ಟಿಸುವ ಬಗ್ಗೆ ಹೇಳಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರನ್ನು ಕಡೆಗಣಿಸಲಾಗಿದೆ. ಇದು ಸಂಪೂರ್ಣ ವಿಫಲ ಬಜೆಟ್ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English