ಮಂಗಳೂರು: ಇಂಧನ ತೈಲ ಬೆಲೆ ಏರಿಕೆಯನ್ನು ಖಂಡಿಸಿ, ಕೇಂದ್ರ ಸರಕಾರದ ಜನವಿರೋಧಿಯನ್ನು ವಿರೋಧಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ಬೆಳಗ್ಗೆ ನಗರದಲ್ಲಿ ಎತ್ತಿನ ಗಾಡಿಯೊಂದಿಗೆ ಸೈಕಲ್ ಜಾಥಾ ನಡೆಯಿತು.
ನಗರದ ಅಂಬೇಡ್ಕರ್ ವೃತ್ತ(ಜ್ಯೋತಿ)ದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಸೈಕಲ್ ಜಾಥಾವನ್ನು ಚಲನಚಿತ್ರ ನಟಿ ಭಾವನಾ ಹಾಗೂ ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಪೆಟ್ರೋಲ್, ಡೀಸೆಲ್ ಬೆಲೆ ದಿನೇದಿನೆ ಗಗನಕ್ಕೇರುತ್ತಿದೆ. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಇಂಧನ ತೈಲ ಬೆಲೆಯೇರಿಕೆಯ ವಿರುದ್ಧ ಬಿಜೆಪಿ ಭಾರೀ ಪ್ರತಿಭಟನೆ ನಡೆಸಿತ್ತು. ಆದರೆ ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ತೈಲದ ಬ್ಯಾರೆಲ್ ಒಂದಕ್ಕೆ 140 ಡಾಲರ್ ಬೆಲೆಯಿತ್ತು. ಇದೀಗ ಈ ಮೊತ್ತದಲ್ಲಿ ಭಾರೀ ಇಳಿಕೆಯಾಗಿದೆ. ಆದರೆ ಎನ್‌ಡಿಎ ಸರಕಾರ ಬೆಲೆಯೇರಿಕೆ ಮಾಡುತ್ತಲೇ ಇದೆ. ಇದರಿಂದ ಜನಸಾಮಾನ್ಯರು ತೀವ್ರ ತೊಂದರೆಗೊಳಗೆ ಒಳಗಾಗಿದ್ದಾರೆ. ಆದರೆ ಬಿಜೆಪಿ ಮಾತ್ರ ವೌನವಾಗಿದೆ ಎಂದು ಟೀಕಿಸಿದರು.
ಜಾಥಾದಲ್ಲಿ ಕೆಲವರು ಸೈಕಲ್‌ನಲ್ಲಿ ಸಂಚರಿಸಿದರು. ಎತ್ತಿನಗಾಡಿಯನ್ನು ಬಳಸಿ ಇಂಧನ ಬೆಲೆಯೇರಿಕೆನ್ನು ಅಣಕವಾಡಲಾಯಿತು.
ಜಾಥಾದಲ್ಲಿ ಮಹಿಳಾ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಮೇಯರ್ ಕವಿತಾ ಸನಿಲ್, ಜಿಪಂ ಸದಸ್ಯೆ ಮಮತಾ ಗಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English