ಮಂಗಳೂರು: ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಧರ್ಮಾಧಿಕಾರಿ ಹಾಗೂ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪಕ ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ.
ಧರ್ಮಸ್ಥಳದ ರತ್ನಗಿರಿಯಲ್ಲಿ ನಡೆದ ಬಾಹುಬಲಿ ಸ್ವಾಮಿ ಮೂರ್ತಿಯ 36ನೇ ವರ್ಷದ ಪ್ರತಿಷ್ಠಾ ಮಹೋತ್ಸವ ವರ್ಧಂತ್ಯುತ್ಸವ ಹಾಗೂ 216 ಕಲಶಗಳಿಂದ ಪಾದಾಭಿಷೇಕದ ಬಳಿಕ ಅವರು ಹೇಳಿದ್ದಾರೆ.
ಪೂಜ್ಯ ಆಚಾರ್ಯ ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರ ನೇತೃತ್ವ ಹಾಗೂ ಉಪಸ್ಥಿತಿಯೊಂದಿಗೆ ಶ್ರವಣಬೆಳಗೊಳದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು ಈಗಾಗಲೇ ತಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.
ಮೂವತ್ತಾರು ವರ್ಷಗಳ ಹಿಂದೆ ರತ್ನಗಿರಿ ದಟ್ಟ ಕಾಡಾಗಿದ್ದು, ಬೆಂಗಳೂರಿನ ಖ್ಯಾತ ಜೋತಿಷಿ ಶಶಿಕಾಂತ ಜೈನ್ ತಿಳಿಸಿದಂತೆ ಈ ಪವಿತ್ರ ಜಾಗ ಪುಣ್ಯ ಭೂಮಿಯಾಗಿ, ತೀರ್ಥ ಕ್ಷೇತ್ರವಾಗಿ ಈಗ ಬೆಳೆದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English