ಚಿತ್ರದುರ್ಗ ಕ್ಷೇತ್ರದಲ್ಲಿ ನಾನೂ ಕೂಡಾ ಟಿಕೆಟ್ ಆಕಾಂಕ್ಷಿ: ನಟಿ ಭಾವನಾ

12:19 PM, Monday, February 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

dakshina-kanndaಮಂಗಳೂರು: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ನಾನೂ ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಕಾರ್ಯದರ್ಶಿ ಹಾಗೂ ನಟಿ ಭಾವನಾ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ನನ್ನ ತಂದೆಯ ಊರು. ಚಿತ್ರದುರ್ಗ ಕ್ಷೇತ್ರದ ಜನ ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಅಲೆಯುವಂತಾಗಿದೆ. ಆ ಸಮಸ್ಯೆಯನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದರೆ, ಚಿತ್ರದುರ್ಗ ಕ್ಷೇತ್ರದಲ್ಲಿ ರಘು ಆಚಾರ್, ಬಸವರಾಜ್, ಷಣ್ಮುಗಂ ಕೂಡಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹೈಕಮಾಂಡ್ ಸೂಚನೆಯಂತೆ ನಾನು ಮುಂದುವರಿಯುತ್ತೇನೆ ಎಂದರು.

ಪಕ್ಷದ ಪ್ರಚಾರಕ್ಕಾಗಿ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿದ್ದು, ಪ್ರಚಾರ ಸಮಿತಿಯಲ್ಲಿ 80 ಸದಸ್ಯರನ್ನು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಚಾರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮಾಲಾಶ್ರೀ, ಸಾಧುಕೋಕಿಲ, ಅಭಿನಯ ಕಾಂಗ್ರೆಸ್ ಸೇರಿದ್ದು, ಇವರೂ ಕಾಂಗ್ರೆಸ್‌‌ನ ಪ್ರಚಾರದಲ್ಲಿ ತೊಡಗುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನತೆಗೆ ತಿಳಿಸಲಾಗುವುದು ಎಂದರು.

dakshina-kannda-2ಬಹುತೇಕ ದಿನಗಳಿಂದ ದ.ಕ ಜಿಲ್ಲೆಯಲ್ಲಿ ಕೋಮು ಸಂಘರ್ಷ, ಕೊಲೆಗಳೇ ಸುದ್ದಿಯಾಗುತ್ತಿವೆ. ಬುದ್ಧಿವಂತರ ಜಿಲ್ಲೆಯಲ್ಲಿ ಯಾಕೆ ಹೀಗಾಯಿತು. ನಾನೂ ಮೂಲತ: ದಕ್ಷಿಣ ಕನ್ನಡದವಳೇ. ಇಲ್ಲಿನ ಪರಿಸ್ಥಿತಿ ನೋಡಿದರೆ ಬಹುಶಃ ಜನತೆ ತಪ್ಪು ತಿಳುವಳಿಕೆಯನ್ನು ಜಾಸ್ತಿ ಬೆಂಬಲಿಸಿ ಒಳ್ಳೆಯ ವಿಚಾರಗಳಿಗೆ ಗಮನ ನೀಡುತ್ತಿಲ್ಲವೆನಿಸುತ್ತಿದೆ ಎಂದರು.

ನನ್ನನ್ನು ಶ್ರೀಮತಿ ಅಂತ ಕರೆಯಬೇಕೆನಿಸಿದರೆ ಹಾಗೆಯೇ ಕರೆಯಿರಿ. ಅದರಲ್ಲಿ ತಪ್ಪೇನಿಲ್ಲ. ಶ್ರೀಮತಿ ಎಂದರೆ ಪ್ರಬುದ್ಧಳು ಎಂದರ್ಥ ಎಂದು ಭಾವನಾ ಹೇಳಿದ್ದಾರೆ.

ಭಾವನಾ ಅವರನ್ನು ಪರಿಚಯಿಸುವ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, `ಶ್ರೀಮತಿ ಭಾವನಾ’ ಎಂದರು. ಆದರೆ, ಪಕ್ಕದಲ್ಲಿದ್ದವರು ಅವರು ಶ್ರೀಮತಿಯಲ್ಲ, ಕುಮಾರಿ ಎಂದಾಗ ಹರೀಶ್ ಅವರು ತಕ್ಷಣ ಸರಿಮಾಡಿಕೊಂಡು `ಕುಮಾರಿ ಭಾವನಾ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಭಾವನಾ, `ಇದರಲ್ಲಿ ತಪ್ಪೇನಿಲ್ಲ. ನನ್ನನ್ನು ಶ್ರೀಮತಿ ಭಾವನಾ ಎಂದೇ ಕರೆಯಿರಿ. ಪರವಾಗಿಲ್ಲ. ಶ್ರೀಮತಿ ಎಂದರೆ ಪ್ರಬುದ್ಧತೆಯಿರುವ ಮಹಿಳೆ ಎಂಬ ಅರ್ಥವೂ ಇದೆ ಎಂದು ಉಳಿದವರಿಗೆ ಪಾಠ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English