`ಹಳ್ಳಿ ಮನೆ ರೊಟ್ಟೀಸ್’ ಶಿಲ್ಪಾಗೆ ವರವಾಗಿ ಬಂದ ಮಹೀಂದ್ರ ಪಿಕ್ಅಪ್ ವಾಹನ

10:03 AM, Tuesday, February 6th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shilpaಮಂಗಳೂರು: `ಹಳ್ಳಿ ಮನೆ ರೊಟ್ಟೀಸ್’ ಮೂಲಕ ಮಲೆನಾಡಿನ ತಿಂಡಿಗಳನ್ನು ಕರಾವಳಿ ಜನರಿಗೆ ಉಣಿಸಿ ಯಶಸ್ವಿಯಾಗಿ ಉದ್ಯಮ ಕ್ಷೇತ್ರಕ್ಕೆ ಬಂದ ಶಿಲ್ಪಾರ ಯಶೋಗಾಥೆಯನ್ನು ಕೇಳಿದ ಮಹೀಂದ್ರಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಮಹೀಂದ್ರ ಅವರು ಮಹೀಂದ್ರ ಪಿಕ್ಅಪ್ ವಾಹನವನ್ನು ಶಿಲ್ಪಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಮಂಗಳೂರಿನಲ್ಲಿ ಕರ್ನಾಟಕ ಏಜೆನ್ಸಿ ಮೂಲಕ ಕಮರ್ಷಿಯಲ್ ಸೇಲ್ಸ್ ಹೆಚ್ಒಡಿ ಫಾರ್ಚುನೇಟ್ ಸೆರಾವೊ ಹಾಗೂ ಕರ್ನಾಟಕ ಏಜೆನ್ಸಿ ಪಾಲುದಾರರಾದ ಸಂತೋಷ್ ರಾಡ್ರಿಗಸ್ ಅವರು ಶಿಲ್ಪಾ ಅವರಿಗೆ ವಾಹನವನ್ನು ಹಸ್ತಾಂತರಿಸಿದರು.

ಕುಟುಂಬ ನಿರ್ವಹಣೆಗಾಗಿ ಹಾಸನ ಮೂಲದ ಶಿಲ್ಪಾ ನಗರದ ಮಣ್ಣಗುಡ್ಡೆಯಲ್ಲಿ ಮಹೀಂದ್ರಾ ಪಿಕ್ಅಪ್ ವಾಹನದಲ್ಲಿ `ಹಳ್ಳಿ ಮನೆ ರೊಟ್ಟೀಸ್’ ಹೆಸರಿನಲ್ಲಿ ಆರಂಭಿಸಿದ ಕ್ಯಾಂಟೀನ್ ಅವರಿಗೆ ಯಶಸ್ಸನ್ನು ತಂದುಕೊಂಡಿತ್ತು. ಆಕೆಯ ಧೈರ್ಯ, ಪರಿಶ್ರಮವನ್ನು ಮೆಚ್ಚಿ ಮಾಧ್ಯಮಗಳು ಆಕೆಯನ್ನು ಜಗತ್ತಿಗೆ ಪರಿಚಯಿಸಿತು. ಇವರ ಸಾಧನೆಯನ್ನು ಮೆಚ್ಚಿ ಹಿಂದೊಮ್ಮೆ ಮಹೀಂದ್ರಾ ಸಿಇಒ ಆನಂದ್ ಮಹೀಂದ್ರ, `ಶಿಲ್ಪಾರ ಸಾಧನೆಯಲ್ಲಿ ಮಹೀಂದ್ರದ ಪಾಲೂ ಇರುವುದು ಅತೀವ ಸಂತೋಷ ತಂದಿದೆ.

ಆಕೆ ಮನಸ್ಸು ಮಾಡಿದರೆ, ಮತ್ತೊಂದು ಕ್ಯಾಂಟೀನ್ ತೆರೆಯುವುದಾದರೆ ನಾನು ವಾಹನ ನೀಡುವ ಮೂಲಕ ಆಕೆಯ ಉದ್ಯಮದಲ್ಲಿ ಹೂಡಿಕೆ ಮಾಡಲು ತಯಾರಿದ್ದೇನೆ’ ಎಂದು ಟ್ವೀಟ್ ಮಾಡಿದ ಸಂದೇಶಕ್ಕೆ ಭಾರೀ ಪ್ರಶಂಸೆ ಬಂದಿತ್ತು. ಇಂದು ಆ ಗಳಿಗೆ ಬಂದಿದೆ. ಶಿಲ್ಪಾ ತಮ್ಮ ಕುಟುಂಬ ಸಮೇತ ಬಂದು ವಾಹನವನ್ನು ಸ್ವೀಕರಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English