ಮಂಗಳೂರು : ‘ವ್ಯಾಲೆಂಟೈನ್ ಡೇ’ ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಶಾಲಾ-ಮಹಾವಿದ್ಯಾಲಯದಲ್ಲಿ ಮಾತೃ-ಪಿತೃ ಪೂಜನೀಯ ದಿನವನ್ನು ಆಚರಿಸಲು ಪ್ರೋತ್ಸಾಸಿಸುವ ಬಗ್ಗೆ ದ.ಕ ಅಪರ ಜಿಲ್ಲಾಧಿಕಾರಿ ಶ್ರೀ. ಕುಮಾರ ಇವರಿಗೆ ಮನವಿ ನೀಡಲಾಯಿತು.
ದೇಶದಲ್ಲಿ 14 ಫೆಬ್ರವರಿಯಂದು ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚಳವಾಗಿದೆ. ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ಧೇಶದಿಂದ ಪಾಶ್ಚಾತ್ಯರ ಈ ಅಂದಾನುಕರಣೆಯು ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣವಾಗುತ್ತಿದೆ. ಪಾಶ್ಚಾತ್ಯರ ಈ ವ್ಯಾಲೆಂಟೈನ್ ದಿನ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವನ್ನಾಗಿ ಆಚರಿಸುತ್ತಿರುವುದು ಖೇಧದ ಸಂಗತಿಯಾಗಿದೆ. ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ ಯುವತಿಯರು ಮದ್ಯಪಾನ, ದೂಮಪಾನ ಮಾಡುವುದು, ಡ್ರಗ್ ಮಾಫಿಯಾದಂತಹ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ ಅನುಚಿತ ಘಟನೆಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಅಷ್ಟೇಅಲ್ಲದೇ ಈ ದಿನ ಸಮಿಕ್ಷೆಯ ಪ್ರಕಾರ ಗರ್ಭನಿರೋಧಕ ಮಾರಾಟ ಅಧಿಕ ವಾಗುತ್ತಿರುವುದು ಅನೈತಿಕತೆ ಹೆಚ್ಚಾಗುತ್ತಿರುವುದರ ದ್ಯೋತಕವಾಗಿದೆ. ಈ ದಿನ ಹುಡುಗಿಯರನ್ನು ಆಕರ್ಷಿಸಲು ವೇಗದಿಂದ ವಾಹನ ಓಡಿಸುವುದು ಮುಂತಾದ ದುರ್ಘಟನೆಗಳ ಪ್ರಮಾಣವು ಹೆಚ್ಚಾಗುತ್ತಿದೆ. ಈ ವ್ಯಾಲೆಂಟೈನ್ ದಿನದ ಕಾರಣ ಶಾಲಾ-ಕಾಲೇಜುಗಳ ಶೈಕ್ಷಣಿಕ ವಾತವರಣ ಹಾಳಾಗುವುದರ ಜೊತೆಗೆ ಕಾನೂನು ಸುವ್ಯಸ್ಥೆಯ ಪ್ರಶ್ನೆಯು ನಿರ್ಮಾಣವಾಗುವ ಬೋಗವಾಧಿ ವೃತ್ತಿಯು ಹೆಚ್ಚಾಗಿ, ಸರಕಾರದ ಮೇಲೆ ಹೆಚ್ಚುವರಿ ಒತ್ತಡ ನಿರ್ಮಾಣವಾಗುತ್ತದೆ.
ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಗಳು :
1.ವ್ಯಾಲೆಂಟೈನ್ ದಿನದಂದು ವಿಶೇಷ ಪೋಲಿಸ್ ದಳ ರಚಿಸಿ ಶಾಲಾ- ಕಾಲೇಜುಗಳಲ್ಲಿ ಅನುಚಿತ ಕೃತ್ಯ ಮಾಡುವವರ ಮೇಲೆ, ವೇಗದಿಂದ ವಾಹನ ಓಡಿಸುವವರ ಮೇಲೆ ಕ್ರಮ ಜರುಗಿಸುವುದು
2. ಪ್ರೇಮಿಗಳ ದಿನದಂದು ನಡೆಯುವ ತಪ್ಪು ಪ್ರಕಾರಗಳನ್ನು ಗಮನದಲ್ಲಿರಿಸಿ ಶಾಲಾ-ಪ್ರಾಚಾರ್ಯರ ಬೈಠೆಕ್ ತೆಗೆದುಕೊಂಡು ಅವರಿಗೆ ಮಾತೃಪಿತೃ ಪೂಜನೀಯ ದಿನ ಆಚರಿಸಲು ಈ ನಿಮಿತ್ತ ಲಿಖಿತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮಾಂಗೀರಾಮ್, ಶ್ರೀ ಯೋಗೀಶ್, ಶ್ರೀ. ಪ್ರಭಾಕರ್ ನಾಯ್ಕ್, ಶ್ರೀ ಉಪೇಮದ್ರ ಆಚಾರ್ಯ, ಸೌ. ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English