ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2018 ಸಮೀಪಿಸುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಯಕ್ಷಗಾನದ ಮೊರೆ ಹೋಗಿದ್ದಾರೆ. ತಮ್ಮ ಮನೆಯಲ್ಲಿ ಕಟೀಲು ಮೇಳದ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ಅವರು ಆಯೋಜಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಸಫಲತೆಗೆ ಪ್ರಾರ್ಥಿಸಿ ಅವರು ಕಟೀಲು ದುರ್ಗಾಪರಮೇಶ್ವರಿ ದೇವರ ಮೊರೆ ಹೋಗಿದ್ದಾರೆ.
ಹಾಗೆ ನೋಡಿದರೆ ರಮಾನಾಥ ರೈ ಅವರ ಮನೆಯಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಫೆ. 24 ರಂದು ರಮನಾಥ್ ರೈ ಅವರ ಮನೆಯ ಅಂಗಳದಲ್ಲಿ ಕಟೀಲು ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಲಿದೆ.
ರಮನಾಥ ರೈ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ತಮ್ಮ ಮನೆಯಲ್ಲಿ ಆಯೋಜಿಸುವ ಮೂಲಕ ತಮ್ಮ ಮೇಲಿದ್ದ ಹಿಂದೂ ವಿರೋಧಿ ಲೇಬಲನ್ನು ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರ ವಿರೋಧಿಗಳು ಆರೋಪಿಸುತ್ತಿದ್ದಾರೆ
Click this button or press Ctrl+G to toggle between Kannada and English