ಮಂಗಳೂರು: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಈಗ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ.
ಐವನ್ ಅವರು ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಸೀಸನ್-4ರ ಮೆಸ್ಟ್ರೋ ಟೈಟಾನ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. ಈ ತಂಡಕ್ಕೆ ಫೆ.17ರಂದು ಫಿಜಾಫೋರಂ ಮಾಲ್ನಲ್ಲಿ ಆಟಗಾರರ ಆಯ್ಕೆ ನಡೆಯಲಿದೆ. ತಂಡಕ್ಕೆ ಕಾನೂಟ್ ಫರ್ನಾಂಡಿಸ್ ಸಹ ಮಾಲೀಕರಾಗಿದ್ದು, ಅಲ್ಫೋನ್ಸ್ ಫರ್ನಾಂಡಿಸ್ ಪಾಲುದಾರರಾಗಿದ್ದಾರೆ.
ಮಂಗಳೂರು, ಕೊಡಗು, ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರು ಪ್ರೀಮಿಯರ್ ಲೀಗ್(ಎಂಪಿಎಲ್-ಸೀಸನ್ 1,2,3) ಟಿ-20 ಕ್ರಿಕೆಟ್ ಪಂದ್ಯಗಳನ್ನು ನಡೆಸುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಪಣಂಬೂರಿನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಮೂಲಕ ಈ ತಂಡ ನಾಡಿನ ಗಮನ ಸೆಳೆದಿದೆ. ಕಳೆದ ಬಾರಿ ಈ ತಂಡ ರನ್ನರ್ ಅಪ್ ಪಡೆದುಕೊಂಡಿತ್ತು.
ಈಗಾಗಲೇ ಶಾಸಕ ಮೊಯ್ದಿನ್ ಬಾವಾ ಹಾಗೂ ಸಚಿವ ರಮಾನಾಥ ರೈ ಅವರು ಎಂಪಿಎಲ್ನ ಒಂದೊಂದು ತಂಡದ ಮಾಲೀಕತ್ವವನ್ನು ಪಡೆದಿದ್ದಾರೆ. ಈಗ ಅವರ ಸಾಲಿಗೆ ಐವನ್ ಸೇರ್ಪಡೆಯಾಗಿದ್ದಾರೆ.
Click this button or press Ctrl+G to toggle between Kannada and English