ಮಂಗಳೂರು: ಮೂರು ದಿನಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿರುವ ವೀರ ಯೋಧರ ಪೈಕಿ ತುಳುನಾಡಿನ ಯೋಧರೊಬ್ಬರಿದ್ದಾರೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ನೂತನ ಕಡಬ ತಾಲೂಕಿನ ಆತೂರು ಸಮೀಪದ ಬಜತ್ತೂರು ಗ್ರಾಮದ ನೇರೆಂಕಿಯ ಮೇಲೂರು ನಿವಾಸಿ ಸಮೂನ್ ಬ್ಯಾರಿ ಹಾಗೂ ಆಮಿನಮ್ಮ ದಂಪತಿಯ ದ್ವಿತೀಯ ಪುತ್ರ ಝುಬೈರ್ ಎಂ. ನೇರಂಕಿ ಅವರೇ ಆ ಕೆಚ್ಚೆದೆಯ ಕಲಿ.
ಬಿಬಿಎಂ ವ್ಯಾಸಂಗ ಮುಗಿಸಿ ದೇಶಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡು ಸಿಆರ್‌ಪಿಎಫ್ ಯೋಧರಾಗಿರುವ ಝುಬೈರ್ 4 ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕರಣ್ ನಗರದಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಕಟ್ಟಡವೊಂದರಲ್ಲಿ ಅವಿತು ಕುಳಿತು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಕೆಲ ಉಗ್ರರು ಒಳನುಗ್ಗಿ ಅಲ್ಲಿದ್ದ ಸೈನಿಕರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಹಲವು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇಂತಹ ಸನ್ನಿವೇಶದಲ್ಲೂ ಅಪಾಯಕಾರಿ ಹಾಗೂ ಅನಿರೀಕ್ಷಿತ ದಾಳಿಯಿಂದ ಕಂಗೆಡದ ಭಾರತದ ಸಿಆರ್‌ಪಿಎಫ್ ಯೋಧರು ಎಲ್ಲಾ ದಾಳಿಗಳನ್ನು ಎದುರಿಸಿ ನಿಂತು ತಕ್ಕ ಉತ್ತರ ನೀಡುವ ಮೂಲಕ ಭಯೋತ್ಪಾದಕರನ್ನು ಸದೆ ಬಡಿದಿದ್ದರು.
Click this button or press Ctrl+G to toggle between Kannada and English