ಮಂಗಳೂರು: ಕಲರ್ ಟಿ.ವಿ. ಚಾನೆಲ್‌ನವರು ನಡೆಸುತ್ತಿರುವ ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಾಷ್ಟ್ರೀಯ ಪ್ರತಿಭಾ ಸ್ಪರ್ಧೆಯಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ತಂಡ ಫೈನಲ್ ಹಂತವನ್ನು ತಲುಪಿದೆ.ಇವರೊಂದಿಗೆ ಭಾಗವಹಿಸಿದ್ದ ಇನ್ನುಳಿದ ೫ ಕಲಾವಿದರ ತಂಡವು ಸ್ಪರ್ಧೆಯ ಅಂತಿಮ ಹಂತವನ್ನು ತಲುಪಿದ್ದಾರೆ.
ಸ್ಪರ್ಧೆಯ ತೀರ್ಪುಗಾರಾಗಿ ಚಿತ್ರನಟ ಧರ್ಮೇಂದ್ರ, ಸೋನಾಲಿ ಬೇಂದ್ರೆ ಹಾಗೂ ಕಿರಣ್‌ಖೇರ್ ಕಾರ್ಯ ನಿರ್ವಹಿಸಿದ್ದರು. ಕಾರ್ಯಕ್ರಮ ವೀಕ್ಷಿಸಿದ ವಿಶೇಷ ಅತಿಥಿಗಳಾಗಿದ್ದ ಚಿತ್ರನಟಿ ಹೇಮಾ ಮಾಲಿನಿ, ಇಶಾ ಡಿಯೋಲ್ ಅವರು ಗಣೇಶ್ ಹಾಗೂ ತಂಡದ ಯಕ್ಷಗಾನದ ವೈಭವವನ್ನು ಶ್ಲಾಘಿಸಿದರು. ಕುದ್ರೋಳಿ ಅವರು ಕರ್ನಾಟಕದ ಯಕ್ಷಗಾನ ಕಲೆಯನ್ನು ‘ಕಿಂಪುರುಷ ಲೀಲೆ’ ಎಂಬ ಪ್ರಸಂಗದ ಮೂಲಕ ಜಾದೂ ಜತೆ ಸೇರಿಸಿ ಕೇವಲ 5 ನಿಮಿಷದ ಕಾಲಾವಧಿಯಲ್ಲಿ ಪ್ರದರ್ಶಿಸಿದರು. ಈ ಕಾರ್ಯಕ್ರಮ ಸೆ. 24 (ಶನಿವಾರ)ರಂದು ರಾತ್ರಿ 9ಗಂಟೆಗೆ ಕಲರ್ ಟಿ.ವಿ. ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ಫೈನಲ್ ಪ್ರಕ್ರಿಯೆಯು ಮತದಾನದ ಮೂಲಕ ನಡೆಯಲಿದ್ದು 6 ಮಂದಿಯಲ್ಲಿ ಒಂದು ತಂಡವನ್ನು ವಿಜೇತರನ್ನಾಗಿ ಘೋಷಿಸಲಾಗುವುದು. ಈ ಬಾರಿ ಮತದಾನಕ್ಕೆ 6 ದಿನಗಳ ಕಾಲಾವಕಾಶವಿದ್ದು ಸೆ. 24ರ ರಾತ್ರಿ 10 ಗಂಟೆಯಿಂದ ಸೆ. 30ರ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಎಸ್‌ಎಂಎಸ್ ಕಳುಹಿಸಬಹುದಾಗಿದೆ. .
ಕುದ್ರೋಳಿ ಗಣೇಶ್ ತಂಡಕ್ಕೆ ಮತ ಹಾಕಲು ಕೆಯುಡಿ ಎಂದು ಟೈಪ್ ಮಾಡಿ 56882ಗೆ ಕಳುಹಿಸಬೇಕು. ಕೊನೆಯ ಹಂತದಲ್ಲಿ ನಡೆಯುವ ಎಸ್. ಎಂ. ಎಸ್ ಮತದಾನದಲ್ಲಿ ಒಂದು ತಂಡವನ್ನು ವಿಜಯಿ ತಂಡ ಎಂದು ಘೋಷಿಸಲಾಗುವುದು.
Click this button or press Ctrl+G to toggle between Kannada and English