ಆಳ್ವಾಸ್‌ ನಲ್ಲಿ ಕೇರಳೀಯಂ: ಕೇರಳದ ಪರಂಪರೆಯ ವೈಭವ

3:04 PM, Monday, February 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

keralianಮೂಡಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಮಂಗಳವಾರ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ‘ಕೇರಳೀಯಂ -2018’ ನ್ನು ಆಯೋಜಿಸಿತ್ತು. ಕೇರಳದ ಸಂಸ್ಕೃತಿ ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆ್ಯನಿ ಲಿಬು ಮಾತನಾಡಿ, ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳವನ್ನು ಇಲ್ಲಿ ಚಿತ್ರಿಸಿರುವ ರೀತಿ ನಿಜಕ್ಕೂ ಆಕರ್ಷಣೀಯ. ನನ್ನಂಥ ಅನಿವಾಸಿ ಭಾರತೀಯರಿಗೆ ಇಂತಹ ಆಯೋಜನೆಗಳು ಸ್ಫೂರ್ತಿ ತುಂಬುತ್ತವೆ. ಇಲ್ಲಿ ಓದುವ ಕೇರಳದ ವಿದ್ಯಾರ್ಥಿಗಳಿಗೆ ಕೇರಳೀಯಂ ತಾಯ್ನಾಡಿನ ಅನುಭವ ಕೊಡುತ್ತದೆ ಎಂದರು.

ಕೇರಳದ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ತಿರುವಾತಿರ, ಮಾರ್ಗಂಗಳಿ, ಒಪ್ಪನ, ಮೋಹಿನಿಯಾಟ್ಟಂ, ಪೂರಕ್ಕಳಿ, ಶಿಂಗಾರಿ ಮೇಳಂ, ಕಳರಿ ಪೈಟ್‌, ಧಫ್2 ಮುಟ್ಟ್, ವಂಜಿಪಾಟ್‌, ನಾಡಂಪಾಟ್‌, ಕಥಕ್ಕಳಿ ಸೇರಿದಂತೆ ಹಲವು ಕಾರ್ಯಕ್ರಮಗಳು ಮೆರುಗು ನೀಡಿದವು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವ, ಆಳ್ವಾಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್‌, ಆಳ್ವಾಸ್‌ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್‌ ರಾಜ್‌, ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ. ಯತಿಕುಮಾರಸ್ವಾಮಿ ಗೌಡ, ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಜೋಸೆಫ್ ಒಲಿವೆರ್‌ ರಾಜ್‌ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English