ಮಾನವ ಹಕ್ಕುಗಳು ಹಾಗೂ ಭಾರತದ ಸವಾಲುಗಳು ಕುರಿತ ರಾಷ್ಟ್ರೀಯ ಕಾರ್ಯಾಗಾರ

8:13 PM, Saturday, September 24th, 2011
Share
1 Star2 Stars3 Stars4 Stars5 Stars
(10 rating, 3 votes)
Loading...

M Veerappa Moily

ಮಂಗಳೂರು: ಸೈಂಟ್‌ ಆಗ್ನೆಸ್‌ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಮಾನವ ಹಕ್ಕು ಶಿಕ್ಷಣ ಘಟಕದ ವತಿಯಿಂದ ‘ಮಾನವ ಹಕ್ಕುಗಳು-ಬದಲಾದ ಒಲವುಗಳು ಹಾಗೂ ಭಾರತದ ಸವಾಲುಗಳು’ ವಿಷಯದ ಕುರಿತು ನಗರದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಖಾತೆ ಸಚಿವ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಜನರ ನಡುವೆ ಏಕತೆ, ರಾಷ್ಟ್ರೀಯ ಭಾವೈಕ್ಯ ಕಾಪಾಡುವ ಉದ್ದೇಶದಿಂದ ಕೇಂದ್ರ ಸರಕಾರ ಕೋಮು ಹಿಂಸೆ ತಡೆ ಮಸೂದೆ ಜಾರಿಗೊಳಿಸಲು ಉದ್ದೇಶಿಸಿದೆ,.ರಾಜ್ಯ ಸರಕಾರಗಳು ತೀವ್ರ ನಿರ್ಲಕ್ಷ್ಯ ತೋರಿದಾಗ ಸಕಾಲದಲ್ಲಿ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಲು ಈ ಮಸೂದೆ ಕೇಂದ್ರದ ನೆರವಿಗೆ ಬರುವುದು ಎಂದು ಅವರು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಸಹಬಾಳ್ವೆ ಮತ್ತು ಮಾನವ ಹಕ್ಕುಗಳ ಕುರಿತು ಅರಿತುಕೊಳ್ಳುಬೇಕು, ಅಭಿವೃದ್ಧಿ ಕೆಲಸಗಳಲ್ಲಿ ಪ್ರಗತಿಯ ಜತೆಗೆ ಮಾನವ ಹಕ್ಕುಗಳ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಅಗತ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಎಸ್‌.ಆರ್‌. ನಾಯಕ್‌ ಅವರು ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಕಾನೂನು ಆಯೋಗದ ಸದಸ್ಯೆ ಡಾ| ಶಶಿಕಲಾ ಗುರುಪುರ ಉಪಸ್ಥಿತರಿದ್ದರು. ಕಾಲೇಜಿನ ಪ್ರಿನ್ಸಿಪಾಲ್‌ ಡಾ| ಎಂ. ಪ್ರೇಮ್‌ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English