ಮಾತೃಭಾಷೆಗಿಂತ ಶ್ರೇಷ್ಠ ಯಾವುದೂ ಇಲ್ಲ: ಪುತ್ತೂರಿನಲ್ಲಿ ಅಮಿತ್ ಷಾ

5:23 PM, Tuesday, February 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

putturಮಂಗಳೂರು: ಮಾತೃಭಾಷೆಗಿಂತ ಶ್ರೇಷ್ಠ ಯಾವುದೂ ಇಲ್ಲ. ಯಾವುದೇ ಹುದ್ದೆಗೆ ಹೋದರೂ ಮಾತೃಭಾಷೆ ಮರೆಯಬೇಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದರು.

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಷಾ, ಪಕ್ಷವನ್ನು ಪಕ್ಕಕ್ಕಿಟ್ಟು ಮಾತನಾಡುತ್ತೇನೆ. ಸ್ವಾತಂತ್ರ್ಯ ಹೋರಾಟ ಸಂದರ್ಭ ಪಕ್ಷ, ಜಾತಿ ಇರಲಿಲ್ಲ. ಸ್ವರಾಜ್ಯದ ಚಿಂತನೆ ಎಲ್ಲರ ಮನದಲ್ಲಿತ್ತು ಎಂದರು.

ಈಗ ವೇದಿಕೆಯಲ್ಲಿ ಐವತ್ತು ದಾಟಿದವರು ಇದ್ದೇವೆ. ಕೆಲವೇ ವರ್ಷದಲ್ಲಿ ಯುವಕರು ಈ ವೇದಿಕೆಯಲ್ಲಿ ಇರಬೇಕು.

ಭಾರತದ ಭವಿಷ್ಯದ ಬಾಗಿಲು ಮುಚ್ಚಿತ್ತು. ಭ್ರಷ್ಟಾಚಾರ ಭಾರತ ದೇಶವನ್ನು ಆವರಿಸಿತ್ತು. ನಾಲ್ಕು ವರ್ಷದ ಹಿಂದೆ ಬಾಗಿಲು ತೆರೆದಿದ್ದೇವೆ. 2014ರ ಚುನಾವಣೆ ಸುವರ್ಣಾಕ್ಷರದಲ್ಲಿ ಬರೆದೆವು. 30 ವರ್ಷದ ನಂತರ ಒಂದೇ ಪಕ್ಷ ಬಹುಮತ ಪಡೆಯಿತು. ಕಿಚಡಿ ಸರಕಾರಗಳಿಂದ ಮುಕ್ತಿಯಾಯ್ತು ಎಂದು 2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಬಗ್ಗೆ ಮಾತನಾಡಿದರು.

ಬಿಜೆಪಿ ಸರ್ಕಾರ ಮಾಡಲು ಅಧಿಕಾರಕ್ಕೆ ಬಂದಿಲ್ಲ. ಸದೃಢ ಭಾರತ ನಿರ್ಮಾಣದ ನಿಲುವು ಬಿಜೆಪಿಯದ್ದು, ಓಟ್ ಬ್ಯಾಂಕ್ ರಾಜಕಾರಣ ನಾವು ಮಾಡಲ್ಲ. ಯಾರನ್ನು ಓಲೈಕೆ ಮಾಡುವ ಉದ್ದೇಶ ನಮಗಿಲ್ಲ ಎಂದು ಅಮಿತ್‌ ಷಾ ಇದೇ ವೇಳೆ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English