ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ, ಪಲಿಮಾರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಪಲಿಮಾರು ಶ್ರೀಗಳು ಶಾ ಅವರನ್ನು ಮಠಕ್ಕೆ ಬರ ಮಾಡಿಕೊಂಡರು. ಕನಕನ ಕಿಂಡಿ ಹಾಗೂ ನವಗ್ರಹ ಕಿಂಡಿ ಮೂಲಕ ಕೃಷ್ಣನ ದರುಶನ ಪಡೆದರು.
ಶಾ, ಪಲಿಮಾರು ಶ್ರೀಗಳಿಗೆ ಶಾಲು ಹೊದಿಸಿ ತುಳಸಿ ಮಾಲೆ ತೊಡಸಿ, ಶ್ರೀಗಳಿಂದ ಅನುಗ್ರಹ ಪಡೆದರು. ಬಳಿಕ ಅವರು ಪಲಿಮಾರು ಮಠದ ಛತ್ರ ಉದ್ಘಾಟಿಸಿದರು.
Click this button or press Ctrl+G to toggle between Kannada and English