ನವದೆಹಲಿ: ಈಗಿರುವ ಮೊಬೈಲ್ ಸಂಖ್ಯೆಗಳ 10 ಅಂಕಿಗಳನ್ನು 13ಕ್ಕೆ ಏರಿಸಲು ಭಾರತೀಯ ದೂರವಾಣಿ ಇಲಾಖೆ ನಿರ್ಧರಿಸಿದೆ. ಜುಲೈ 1ರಿಂದ ಈಗಿರುವ 10 ಸಂಖ್ಯೆಗಳ ಬದಲಾಗಿ 13 ಅಂಕಿಗಳ ಮೊಬೈಲ್ ಸಂಖ್ಯೆ ಜಾರಿಗೆ ಬರಲಿದೆ.
ನೆಟ್ವರ್ಕ್ ಕಂಪನಿಗಳಿಗೆ ಮೊಬೈಲ್ ಸಂಖ್ಯೆಗಳನ್ನು 13ಕ್ಕೆ ಏರಿಸಲು ಕೋರಲಾಗಿದೆ. ಈಗಿರುವ ಮೊಬೈಲ್ ಸಂಖ್ಯೆಗೆ ಹೆಚ್ಚುವರಿಯಾಗಿ ಮೂರು ಅಂಕಿಗಳನ್ನು ಸೇರಿಸಲು ಸೂಚಿಸಲಾಗಿದೆ. ಬಿಎಸ್ಎನ್ಎಲ್ ಸಹ 2018ರ ಡಿಸೆಂಬರೊಳಗೆ 13 ಸಂಖ್ಯೆಗಳನ್ನು ಗ್ರಾಹಕರಿಗೆ ನೀಡಲಿದೆ. ಅಕ್ಟೋಬರ್ 1ರಿಂದ ಡಿಸೆಂಬರ್ 31ರೊಳಗೆ ಈ ಬದಲಾವಣೆ ಪ್ರಕ್ರಿಯೆ ನಡೆಯಲಿದೆಯಂತೆ.
ಆದರೆ ಮೊಬೈಲ್ ಸಂಖ್ಯೆಗಳ ಬದಲಾವಣೆ ಬಗ್ಗೆ ದೂರವಾಣಿ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ. ಇನ್ನು ಬೃಹತ್ ನೆಟ್ವರ್ಕ್ ಜಾಲ ಹೊಂದಿರುವ ವೊಡಾಫೋನ್, ಜಿಯೋ, ಐಡಿಯಾ ಆದೇಶದ ಬಗ್ಗೆ ಇನ್ನೂ ಮಾಹಿತಿ ಇಲ್ಲವೆಂದು ತಿಳಿಸಿವೆ. 13 ಅಂಕಿಗಳು ಗ್ರಾಹಕರಿಗೆ ಹೊರೆಯಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
Click this button or press Ctrl+G to toggle between Kannada and English