ಸೌರಾಷ್ಟ್ರ: ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್‌ವೊಬ್ಬರು ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ.
ಅವನಿ ಚತುರ್ವೇದಿ…ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿದ ಭಾರತೀಯ ಸೇನೆಯ ಮಹಿಳಾ ಪೈಲಟ್ ಅಧಿಕಾರಿ. ಮಿಗ್-21 ಬಿಸನ್ ಯುದ್ಧ ವಿಮಾನ ಹಾರಾಟ ನಡೆಸಿ ಅವನಿ ಚತುರ್ವೇದಿ ನೂತನ ಇತಿಹಾಸ ಬರೆದಿದ್ದಾರೆ.
ಗುಜರಾತ್‌ನ ಜಮ್‌ನಗರ್‌ನಲ್ಲಿ ಸೋಮವಾರ ಅವನಿ ಚತುರ್ವೇದಿ ಒಬ್ಬರೇ ಮಿಗ್-21 ಬಿಸನ್ ಯುದ್ಧ ವಿಮಾನ ಹಾರಾಟ ನಡೆಸಿದ್ದಾರೆ. ಭಾರತೀಯ ವಾಯುಪಡೆ ಹಾಗೂ ಭಾರತಕ್ಕೆ ಇದೊಂದು ಅನನ್ಯ ಸಾಧನೆ ಎಂದು ವಾಯುಪಡೆಯ ಕಮಾಂಡರ್ ಪ್ರಶಾಂತ್ ದೀಕ್ಷಿತ್ ತಿಳಿಸಿದ್ದಾರೆ.
ಮಿಗ್-21 ಬಿಸನ್ ಯುದ್ಧ ವಿಮಾನ ವಿಶ್ವದಲ್ಲೇ ಅತ್ಯಧಿಕ (ಪ್ರತಿ ಗಂಟೆಗೆ 340 ಕಿ.ಮೀ.) ಲ್ಯಾಂಡಿಂಗ್ ಹಾಗೂ ಟೇಕ್‌ಆಫ್ ವೇಗವನ್ನು ಹೊಂದಿದೆ ಎಂದು ಪ್ರಶಾಂತ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.
ಅವನಿ ಚತುರ್ವೇದಿ ಮಧ್ಯಪ್ರದೇಶದ ರೇವಾ ಜಿಲ್ಲೆಯವರಾಗಿದ್ದಾರೆ. 2016ರ ಜೂನ್ 8ರಂದು ಅವನಿ ಚತುರ್ವೇದಿ, ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಅವರನ್ನು ಭಾರತದ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ಗಳೆಂದು ಘೋಷಿಸಲಾಗಿತ್ತು.
ಅವಾನಿ ಚತುರ್ವೇದಿ, ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಅವರ ತರಬೇತಿ ಜನವರಿಯಲ್ಲಿ ಪೂರ್ಣಗೊಂಡಿದೆ. ಶೀಘ್ರವೇ ಮೋಹನಾ ಸಿಂಗ್ ಹಾಗೂ ಭಾವನಾಕಾಂತ್ ಕೂಡ ಯುದ್ಧ ವಿಮಾನದ ಹಾರಾಟ ನಡೆಸಲಿದ್ದಾರೆ.
Click this button or press Ctrl+G to toggle between Kannada and English